ಹುಬ್ಬಳ್ಳಿ-ಪುಣೆ ವಿಮಾನ ಸಂಚಾರ ಫೆ.2ರಿಂದ

16 FLIGHT
Published on

ಹುಬ್ಬಳ್ಳಿ: ಹುಬ್ಬಳ್ಳಿ - ಪುಣೆ- ಹುಬ್ಬಳ್ಳಿ ಮಾರ್ಗವಾಗಿ ಇನ್ನು ವಾರಕ್ಕೆ ನಾಲ್ಕು ವಿಮಾನಗಳು ಸಂಚರಿಸಲಿವೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಹುಬ್ಬಳ್ಳಿ- ಪುಣೆ-ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಕ್ಕೆ ಕ್ರಮಕೈಗೊಂಡಿದೆ.

ಫೆಬ್ರವರಿ 2ರಿಂದ ನಾಲ್ಕು ವಿಮಾನಗಳು ಸಂಚಾರ ಪುನರಾರಂಭಿಸಲಿವೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ತಮ್ಮ ಕೋರಿಕೆ-ಪ್ರಸ್ತಾವನೆ ಪರಿಗಣಿಸಿ ಹುಬ್ಬಳ್ಳಿ - ಪುಣೆ- ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಿಸಿದ್ದಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಆಡಳಿತ ಮಂಡಳಿಗೆ ಸಚಿವರು ಧನ್ಯವಾದ ಅರ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net