ಹನ್ನೊಂದು ಕೇಜಿ ಗಾಂಜಾ ವಶ

1643858633857
Published on

ವಿಜಯಪುರ: ವಿಜಯಪುರ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಒಣಗಾಂಜಾ ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಮಿರಗಿ ಗ್ರಾಮದ ಚಂದ್ರಮ ಬಡದಾಳೆ ಎಂಬಾತನ ತೋಟದಲ್ಲಿ ಗಾಂಜಾ ಪತ್ತೆಯಾಗಿದೆ. ಅಕ್ರಮವಾಗಿ ಮಾರಾಟ ಮಾಡಲು ಒಣಗಾಂಜಾ ಸಂಗ್ರಹಿಸಿದ್ದ ಚಂದ್ರಮ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಅಕ್ರಮ ಗಾಂಜಾ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ ವೇಳೆ, 2ಲಕ್ಷ 20 ಸಾವಿರ ಮೌಲ್ಯದ 11 ಕೆಜಿ ಒಣಗಾಂಜಾ ಪತ್ತೆಯಾಗಿದ್ದು, ಜಪ್ತಿ ಮಾಡಿದ್ದಾರೆ. ಆರೋಪಿ ಚಂದ್ರಮ ಬಡದಾಳೆಯನ್ನು ವಶಕ್ಕೆ ಪಡೆದ ಅಬಕಾರಿ ಪೊಲೀಸರು, NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಡಿ ವೈ ಎಸ್ ಪಿ ಹೆಚ್ ಎಸ್ ವಜ್ರಮಟ್ಟಿ, ಸಿಪಿಐ ಮಂಜುನಾಥ ಶಿರಹಟ್ಟಿ, ಸಿಬ್ಬಂದಿಗಳಾದ ಬಿ ಎಸ್ ಇಂಡಿ, ಎಂ ಎಸ್ ಕೊಟ್ಟಲಗಿ, ಸೂರ್ಯಕಾಂತ ಕಲ್ಮನಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net