ಹನೂರು ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಮಂಜುನಾಥ್ ಭೇಟಿ

18kglphoto1...
Published on

ಕೊಳ್ಳೇಗಾಲ: ಹನೂರು ಕ್ಷೇತ್ರದ ನೂತನ ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಬುಧವಾರ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ, ಧನಗೆರೆ, ಸರಗೂರು, ನರೀಪುರ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.


ಇದಕ್ಕೂ ಮೊದಲು ಶ್ರೀ ಶಿಂಷಾ ಮಾರಮ್ಮನ ಸನ್ನಿಧಿ ಹಾಗೂ ದರ್ಗಾಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜತೆ ಭೇಟಿ ನೀಡಿ ಪೂಜೆ ಸಲ್ಲಿದ ಬಳಿಕ ಭರಚುಕ್ಕಿ ಜಲಪಾತ ವೀಕ್ಷಣೆ ಮಾಡಿದರು.


ನಂತರ ಸತ್ತೇಗಾಲ ಗ್ರಾಮದ ಮಾರಮ್ಮನ್ನ ಸನ್ನಿದ್ಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕೋಟೆ ಬೀದಿಗೆ ತೆರಳಿದರು. ಈ ವೇಳೆ ನಿವಾಸಿಗಳು ನೂತನ ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಜನರೊಟ್ಟಿಗೆ ಪ್ರಮುಖ ಬೀದಿಯನ್ನು ಪ್ರದಕ್ಷಿಣಿ ಹಾಕಿ ಧನ್ಯವಾದಗಳ್ನು ತಿಳಿಸಿದರು.


ನಂತರ, ಧನಗೆರೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಪರಿಮಿತಿಯೊಳಗೆ ಹೆದ್ದಾರಿಯ ಒಂದು ಬದಿಯ ರಸ್ತೆಯು ಅಪೂರ್ಣವಾಗಿರುವ ಬಗ್ಗೆ ಜನರು ಗಮನಸೆಳೆದರು. ಸ್ಥಳದಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪೋನ್ ಕರೆ ಮಾಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.


ಬಳಿಕ ಸರಗೂರು, ನರೀಪುರ ಗ್ರಾಮದಲ್ಲಿ ಕಾರ್ಯಕರ್ತರು ಎಂ.ಆರ್.ಮಂಜುನಾಥ್ ಅವರಿಗೆ ಭವ್ಯ ಸ್ವಾಗತ ಕೋರಿದರು. ದಾರಿ ಉದ್ದಕ್ಕೂ ಗ್ರಾಮಸ್ಥರು ನೂತನ ಶಾಸಕರಿಗೆ ಹಾರ, ಶಾಲು ಹಾಕಿ ಸನ್ಮಾನಿಸಿದರು.


ವೃದ್ಧೆಗೆ ನೆರವು: ಗೆದ್ದು ಶಾಸಕರಾಗಿ ಕ್ಷೇತ್ರಕ್ಕೆ ಮೊದಲ ಬಾರಿಗೆ ಬಂದೊಡನೆ ಸತ್ತೇಗಾಲ ಗ್ರಾಮದ ನಿವಾಸಿ ಕಾಲು ನೋವುನಿಂದ ಬಳಲುತ್ತಿದ್ದ ವೃದ್ಧೆಗೆ ಧನ ಸಹಾಯ ಮಾಡಿ, ಆರೋಗ್ಯ ವಿಚಾರಿಸಿದರು.


ಜೆಡಿಎಸ್ ಮುಖಂಡರಾದ ಪ್ರಭುಸ್ವಾಮಿ, ಮಂಜೇಶ್, ರವಿ, ಸುರೇಶ್, ಮುರುಗೇಶ್, ರಫಿಕ್, ರಮೇಶ್, ಪ್ರಮೋದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net