ಹನೂರಿನಲ್ಲಿ ಭಕ್ತಿಯಿಂದ ಷಷ್ಠಿ ಆಚರಣೆ

29 HANUR 1
ಹನೂರಿನಲ್ಲಿ ಮಂಗಳವಾರ ಜನರು ಹುತ್ತಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಂಪಾ ಷಷ್ಠಿ ಆಚರಿಸಿದರು.
Published on

ಹನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಚಂಪಾ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಹನೂರು, ಮಂಗಲ, ಕಣ್ಣೂರು, ಚನ್ನಾಲಿಂಗನಹಳ್ಳಿ, ಆರ್.ಎಸ್.ದೊಡ್ಡಿ, ರಾಮಾಪುರ, ಬಂಡಳ್ಳಿ, ಒಡೆಯರಪಾಳ್ಯ, ಪಿ.ಜಿ.ಪಾಳ್ಯ ಗ್ರಾಮಗಳ ಮಹಿಳೆಯರು ಉಪವಾಸವಿದ್ದು, ಕುಟುಂಬ ಸಮೇತ ತೆರಳಿ ಹುತ್ತಕ್ಕೆ ಹಾಲನ್ನೆರೆದು (ತನಿ) ಬಾಳೆಹಣ್ಣಿನ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು. ಕೆಲವು ಕಡೆಗಳಲ್ಲಿ ಹುತ್ತಕ್ಕೆ ಕೋಳಿಯನ್ನು ಬಲಿ ನೀಡಿ ಅದರ ರಕ್ತವನ್ನು ಸಮರ್ಪಿಸಿದರು. ಹನೂರು ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇಗುಲದ ಹಿಂಭಾಗದಲ್ಲಿರುವ ನಾಗರ ಮೂರ್ತಿಗಳಿಗೂ ಪೂಜೆ ಸಲ್ಲಿಸಲಾಯಿತು.

ಹನೂರಿನಲ್ಲಿ ಆರ್‌ಎಂಸಿ ಆವರಣ, ಬನ್ನಿಮಂಟಪ ಬಡಾವಣೆ, ಅಜ್ಜೀಪುರ ಗ್ರಾಮಕ್ಕೆ ತೆರಳುವ ರಸ್ತೆ ಬದಿಯ ಮಾಳದಲ್ಲಿರುವ ಹುತ್ತಕ್ಕೆ ತೆರಳಿ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net