

ಹನೂರು: ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಕಾರ್ಯಕರ್ತರು, ಕೈಯಲ್ಲಿ ರಾರಾಜಿಸಿದ ಕಾಂಗ್ರೆಸ್ ಬಾವುಟ. ಜನರ ಮನಸೂರೆಗೊಂಡ ವಿವಿಧ ಕಲಾ ತಂಡಗಳ ಪ್ರದರ್ಶನ. ಕಾಂಗ್ರೆಸ್ ನಾಯಕರ ಬಗ್ಗೆ ಮೊಳಗಿನ ಜಯಘೋಷ. ಕಾರ್ಯಕರ್ತರಲ್ಲಿ ಉತ್ಸಾಹವೋ ಉತ್ಸಾಹ. ಎಲ್ಲೆಂದರಲ್ಲಿ ಜನವೋ ಜನ…!
ಇದು ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಆರ್. ನರೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ವೇಳೆ ಕಂಡು ಬಂದ ದೃಶ್ಯಗಳಿವು. ಪಾದಯಾತ್ರೆಯು ದೊಡ್ಡಿಂದುವಾಡಿ ಗ್ರಾಮದ ಮೂಲಕ ಸಿಂಗಾನಲ್ಲೂರು, ಕೊಂಗರಹಳ್ಳಿ, ಕಾಮಗೆರೆ, ಮಂಗಲ ಗ್ರಾಮ ಹಾಗೂ ಆರ್.ಎಸ್ ದೊಡ್ಡಿ ಮೂಲಕ ಹನೂರಿನವರೆಗೆ ನಡೆಯಿತು.
ಪಾದಯಾತ್ರೆಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಪಾದಯಾತ್ರೆಯು ಆಗಮಿಸಿದ ಗ್ರಾಮಗಳಲ್ಲಿ ಆಯಾ ಗ್ರಾಮದ ಕಾರ್ಯಕರ್ತರು ಹಾಗೂ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲಲ್ಲಿ ಕೆಲಕಾಲ ನಿಂತು ವಿಶ್ರಾಂತಿ ಪಡೆದು ಸಾಗಿದ ಪಾದಯಾತ್ರೆಯ ಜನರಿಗೆ ಗ್ರಾಮಗಳಲ್ಲಿ ನೀರು, ಮಜ್ಜಿಗೆ, ಟೀ, ಬಿಸ್ಕತ್ ನೀಡಲಾಗುತ್ತಿತ್ತು. ಗಣ್ಯರಿಗೆ ಹಾಗೂ ಕಾರ್ಯಕರ್ತರು ಆಯಾಸವನ್ನು ಲೆಕ್ಕಿಸದೇ ಉತ್ಸಾಹದಿಂದ ಹೆಜ್ಜೆ ಹಾಕಿದರು. ಈ ಮೂಲಕ ಪಾದಯಾತ್ರೆ ಯಶಸ್ವಿಯನ್ನು ಕಂಡಿತು.
ಮೆರಗು ತಂದ ಕಲಾ ತಂಡಗಳು: ಡೊಳ್ಳುಕುಣಿತ, ಬೀರದೇವರ ಕುಣಿತ, ವೀರಗಾಸೆ ಕುಣಿತ, ತಮಟೆ ನೃತ್ಯ ಹಾಗೂ ಇನ್ನಿತರೆ ಕಲಾ ತಂಡಗಳ ನೃತ್ಯ ಪಾದಯಾತ್ರೆಗೆ ಮೆರಗು ನೀಡಿತ್ತಲ್ಲದೇ ತಮಿಳುನಾಡಿನ ಪೆನ್ನಾಗರಂನ ಮಹಿಳಾ ಕಲಾತಂಡದ ನೃತ್ಯ ಎಲ್ಲರ ಗಮನ ಸೆಳೆಯಿತು. ಪಾದಯಾತ್ರೆಯ ವೇಳೆ ಶಾಸಕ ಆರ್.ನರೇಂದ್ರ ಪುತ್ರ ನವನೀತಗೌಡ ಅವರನ್ನು ಕಾರ್ಯಕರ್ತರು ಹುರಿದುಂಬಿಸಿ ಕುಣಿಯಲು ಪ್ರೇರೇಪಿಸಿದರು. ಇದರಿಂದ ಕಾರ್ಯಕರ್ತರೊಂದಿಗೆ ಶಾಸಕನ ಪುತ್ರ ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿದರು.
ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕಾಂಗ್ರೆಸ್ ತನ್ನ 75 ವರ್ಷದ ಅವಧಿಯಲ್ಲಿ ದೇಶದ ಜನತೆಗೆ ಉತ್ತಮ ಆಡಳಿತ ನೀಡುವುದರ ಮೂಲಕ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನ ಮನ್ನಣೆ ಪಡೆದಿದೆ. ಆದರೆ ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಇತ್ತ ಉತ್ತಮ ಆಡಳಿತವನ್ನು ನೀಡುತ್ತಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಳೆಯನ್ನು ಏರಿಕೆ ಮಾಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ. ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಗಣನೀಯ ಸಾಧನೆ ಕಂಡಿಲ್ಲ. ಆಗಾಗಿ ಇಂತಹ ಸರ್ಕಾರ ನಮಗೆ ಬೇಕಾ? ಇದರಿಂದಾಗಿ ದೇಶದ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಕಿಡಿಕಾರಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಶಾಸಕ ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಶಾಸಕರಾದ ಎಸ್.ಜಯಣ್ಣ, ಬಾಲರಾಜು ಇತರರಿದ್ದರು.
ಫೋಟೋ
25 ಹನೂರು 2 ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಮಾಜಿ ಸಚಿವ ಚೆಲುವರಾಯ ಸ್ವಾಮಿ ಬ್ಯಾಂಡ್ ಬಾರಿಸುವುದರ ಮೂಲಕ ಚಾಲನೆ ನೀಡಿದರು. ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ತಿಮ್ಮಯ್ಯ, ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಜಯಣ್ಣ, ಬಾಲರಾಜು,
25 ಹನೂರು 2 ಎ ಪಾದಯಾತ್ರೆಯಲ್ಲಿ ನೆರೆದಿದ್ದ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಮುಖಂಡರು.
25 ಹನೂರು 2 ಬಿ ಪಾದಯಾತ್ರೆಯಲ್ಲಿ ಕಾರ್ಯಕರ್ತರು ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. (ಶಾಸಕ ಪುತ್ರ ಇದ್ದಾರೆ)
25 ಹನೂರು 2 ಸಿ ಶಾಸಕ ಆರ್.ನರೇಂದ್ರ ಅವರ ಪುತ್ರ ನವನೀತ್‌ಗೌಡ ಅವರನ್ನು ಕಾರ್ಯಕರ್ತರು ಮೇಲೆತ್ತಿ ಸಂಭ್ರಮ ಪಟ್ಟರು.