ಹನುಮನ ವೇಷಧಾರಿಯಾಗಿ ಕುಣಿದ ಯುವಕರು

17kkr1(4-25 hanumanta utsava nekar
Published on

ಕಿಕ್ಕೇರಿ: ಹನುಮನಂತೆ ವೇಷಧಾರಿಯಾಗಿ ಬಣ್ಣ ಹಚ್ಚಿಕೊಂಡು ಯುವಕರು ಹನುಮೋತ್ಸವದಲ್ಲಿ ಕುಣಿದು ಕುಪ್ಪಳಿಸಿದರು.

ಕುರುಹಿನಶೆಟ್ಟಿ ಸಮುದಾಯ ಹಳೇ ಭಜನೆಮನೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಹನುಮಂತ ದೇವರ ಉತ್ಸವದ ಅಂಗವಾಗಿ ಎತ್ತ ನೋಡಿದರೂ ಯುವಕರು, ಪುಟಾಣಿಗಳು ಕಪಿ ಸೇನೆಯಂತೆ ಕಾಣಿಸುತ್ತಿದ್ದ ನೋಟ ನೋಡುಗರಿಗೆ ಖುಷಿ ನೀಡಿತು.

ಮನೆಯ ಮುಂದೆ ಕೊಡ, ಬಕೆಟ್‌ಗಳಲ್ಲಿ ಇಡಲಾಗಿದ್ದ ಬಣ್ಣ ಬಣ್ಣದ ನೀರು ತೆಗೆದುಕೊಂಡು ಪರಸ್ಪರ ಎರಚಾಡಿದರು. ಬಣ್ಣದ ಪುಡಿಯನ್ನು ಮುಖಕ್ಕೆ ಪೈಪೋಟಿಯಲ್ಲಿ ಮೆತ್ತಿಕೊಂಡು ಖುಷಿಪಟ್ಟರು.

ಪರೀಕ್ಷೆ ಮುಗಿದು ಬೇಸಿಗೆ ರಜೆಯ ಕಾರಣ ಮಕ್ಕಳಿಗೆ ಹೊಸ ಆಟದಂತೆ ಹನುಮಂತೋತ್ಸವ ಕಂಡು ಬಂದರೆ, ಅಜ್ಜ, ಅಜ್ಜಂದಿರು ಮೊಮ್ಮಕ್ಕಳ ಬಣ್ಣದ ವೇಷ ಕಂಡು ಸಂಭ್ರಮಪಟ್ಟರು. ಇಡೀ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಉತ್ಸವ ವೀಕ್ಷಿಸಲು ಸುತ್ತಮುತ್ತಲ ಗ್ರಾಮದ ಜನರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net