

ನಾಗಮಂಗಲ: ಯೋಗಿಯಾಗಲು ವಿಶೇಷ ಅರ್ಹತೆಗಳು ಬೇಕು. ಆದರೆ ಯಾರು ಬೇಕಾದರು ಉಪಯೋಗಿ ಆಗಬಹುದು. ಅಂತಹ ಅಪರೂಪದ ಉಪಯೋಗಿ ಎಆರ್‌ಟಿಒ ಎಚ್.ಹನುಮಂತರಾಯಪ್ಪ ಎಂದು ನಾಗಮಂಗಲ ಸಹಾಯಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕ ಪ್ರವೀಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವಾ ನಿವೃತ್ತಿ ಹೊಂದಿದ ನಾಗಮಂಗಲ ಎಆರ್‌ಟಿಒ ಹನುಮಂತರಾಯಪ್ಪ ಅವರಿಗೆ ಪಟ್ಟಣದ ಆರ್‌ಟಿಒ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಬ್ಬ ವ್ಯಕ್ತಿ ಕೆಲವರಿಗೆ ಮಾತ್ರ ಉಪಯೋಗಿಯಾಗಲು ಸಾಧ್ಯ. ಆದರೆ, ಹನುಮಂತರಾಯಪ್ಪ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲರಿಗೂ ಉಪಯೋಗಿಗಳಾಗಿ ಕರ್ತವ್ಯಪರತೆ ಮೆರೆದು ಇಲಾಖೆಯ ಬಹುಮುಖ್ಯ ಆಸ್ತಿಯಾಗಿದ್ದಾರೆ ಎಂದರು.
ಮಂಡ್ಯ ಜಿಲ್ಲಾ ಎಆರ್‌ಟಿಒ ವಿವೇಕಾನಂದ, ಮಂಡ್ಯ ಜಿಲ್ಲಾ ಕೆಎಸ್‌ಆರ್‌ಟಿಸಿ ಡಿಸಿ ನಾಗರಾಜ್, ಚಿಂತಾಮಣಿ ಆರ್‌ಟಿಒ ಮೋಟಾರು ವಾಹನ ನಿರೀಕ್ಷಕ ಸಿ.ಎಸ್. ಸತೀಶ್, ಸಾರ್ವಜನಿಕರಾದ ಸುಭಾಷ್, ಮುಳುಕಟ್ಟೆ ಸುರೇಶ್, ಉಪ್ಪಾರಹಳ್ಳಿ ವೆಂಕಟೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ರಮೇಶ್, ನಾಗೇಶ್ ಇತರರಿದ್ದರು.