ಹನುಮಂತ ಮಾವಿನಮರದ ಪಿಕೆಪಿಎಸ್ ಅಧ್ಯಕ್ಷ

Hanumantha is the president of PKPS of Mango tree
ಕೋಟೆಕಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹನುಮಂತ ಮಾವಿನಮರದ, ಉಪಾಧ್ಯಕ್ಷರಾಗಿ ಲಕ್ಷ್ಮಣ ಹಾಲನ್ನವರ ಆಯ್ಕೆಯಾದರು.
Published on

ಗುಳೇದಗುಡ್ಡ: ಸಮೀಪದ ಕೋಟೆಕಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹನುಮಂತ ಮಾವಿನಮರದ, ಉಪಾಧ್ಯಕ್ಷರಾಗಿ ಲಕ್ಷ್ಮಣ ಹಾಲನ್ನವರ ಅವಿರೋಧ ಆಯ್ಕೆಯಾಗಿದ್ದಾರೆ.

ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಹನುಮಂತ ಮಾವಿನಮರದ, ಕೋಟೆಕಲ್ಲ ಪಿಕೆಪಿಎಸ್‌ಗೆ ತನ್ನದೇ ಇತಿಹಾಸವಿದೆ.

ನಮ್ಮ ಹಿರಿಯರು ಸಂಘವನ್ನು ಪ್ರಾರಂಭಿಸಿ 72 ವರ್ಷಗಳಾಗಿವೆ. ಸಂಘ ಕಳೆದ ಹದಿನೈದು ವರ್ಷದ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಸಂಘದ ವ್ಯವಹಾರ 38.50 ಕೋಟಿ ರೂ. ದಾಟಿದೆ. ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಶ್ರಮ, ಷೇರುದಾರರು, ಗ್ರಾಹಕರ ವಿಶ್ವಾಸದಿಂದ ಬ್ಯಾಂಕ್ ಬೆಳೆದಿದೆ ಎಂದರು.

ಬ್ಯಾಂಕ್ ವ್ಯಾಪ್ತಿಯ ಗುಳೇದಗುಡ್ಡದಲ್ಲಿ ನೇಕಾರರೇ ಅಧಿಕವಿದ್ದು, ನೇಕಾರರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಯಲಗುರ್ದಪ್ಪ ತೊಗಲಂಗಿ, ಸಂಗಪ್ಪ ಹಡಪದ, ಮಾಗುಂಡಪ್ಪ ಸುಂಕದ, ಮಳಿಯಪ್ಪ ಹಾವಡಿ, ಯಮನಪ್ಪ ರಾಠೋಡ, ದ್ಯಾಮಣ್ಣ ಗದ್ದನಕೇರಿ, ಸಂತೋಷ ತಿಪ್ಪಾ, ನಾಗಪ್ಪ ಮುರಗೋಡ, ನಿರ್ಮಲಾ ಕಳ್ಳಿಗುಡ್ಡ, ಶಶಿಕಲಾ ಅಬಕಾರಿ, ಸಂಘದ ವ್ಯವಸ್ಥಾಪಕ ಚಂದ್ರಶೇಖರ ಕಲ್ಯಾಣಿ, ಶೇಖರ ರಾಠೋಡ, ಸಂತೋಷ ನಾಯನೇಗಲಿ, ಸಚಿನ್ ರಾಂಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net