ಹನುಮ ಭಕ್ತರಿಂದ ಬೈಕ್ ರ್ಯಾಲಿ

Published on

ಬಳ್ಳಾರಿ : ನಗರದಲ್ಲಿ ಹನುಮ ಭಕ್ತರಿಂದ ಮರೂರು ಆಂಜನೇಯ ಸ್ವಾಮಿಯ 9ನೇ ವರ್ಷದ ಅಂಗವಾಗಿ ಬೈಕ್ ರ್ಯಾಲಿ‌ಗೆ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಚಾಲನೆ ನೀಡಿ‌ ಬಳಿಕ ಮಾತನಾಡಿದರು. ಹನುಮನ ನಂಬಿದರೆ ಎಲ್ಲ ತಾಪತ್ರೆಯಗಳು ದೂರವಾಗಲಿವೆ. ಹನುಮನ ಶಕ್ತಿ ಅಂತಹದ್ದು. ಎಲ್ಲರೂ ಒಗ್ಗಟ್ಟಾದರೆ ಹಿಂದುತ್ವ ಉಳಿಯಲಿದೆ ಎಂದರು.
ಇದಕ್ಕೂ ಮುನ್ನ ಇಲ್ಲಿನ ಮೋಕಾ ರಸ್ತೆಯ ಕೆಇಬಿ ಸರ್ಕಲ್‌ನಲ್ಲಿ ಜಮಾಯಿಸಿದ ಸಾವಿರಾರು ಭಕ್ತರು ಜೈ ಶ್ರೀ ರಾಮ್, ಜೈ ಹನುಮ ಎಂದು ಘೋಷಣೆ ಕೂಗಿದರು. ಎಲ್ಲಿ ನೋಡಿದರೂ ಹನುಮನ ಬಾವುಟ ರಾರಾಜಿಸಿದವು.
ನಗರದ ಕೆಇಬಿ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿ ಸಂಗಮ ಸರ್ಕಲ್, ಪವನ್ ಹೋಟೆಲ್, ಮಿಲ್ಲರ್ ಪೇಟೆ, ಗಂಗಪ್ಪ ಜಿನ್, ಬೆಂಗಳೂರು ರಸ್ತೆ ಮೂಲಕ ಮೋತಿ ವೃತ್ತ, ಏಳು ಮಕ್ಕಳ ತಾಯಮ್ಮ ಗುಡಿ, ಟ್ರಾಮೆಕರ್ ಸೆಂಟರ್, ಸುಧಾ ಕ್ರಾಸ್, ಕುಮಾರ್ ಸ್ವಾಮಿ ದೇವಾಲಯ, ಎಸ್ಟಿ ಸರ್ಕಲ್ ಮೂಲಕ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಾಲಯ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net