ಹನುಮ ಜಯಂತಿ ಸಂಪನ್ನ

14Harugeri2
Published on

ಹಾರೂಗೇರಿ: ಪಟ್ಟಣದ ಹನುಮ ಜಯಂತಿಯು ಈಚೆಗೆ ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಭಕ್ತರು ದೀರ್ಘ ದಂಡ ನಮಸ್ಕಾರ, ಉರುಳು ಸೇವೆ ಹಾಗೂ ಓಕುಳಿ ಕೊಂಡಕ್ಕೆ ನೀರು ಹಾಕಿ ಭಕ್ತಿಯ ಪರಾಕಾಷ್ಟೆ ಪ್ರದರ್ಶಿಸಿದರು.

ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರದೊಂದಿಗೆ ಬುತ್ತಿ ಪೂಜೆ ನೆರವೇರಿಸಲಾಯಿತು. ಸಂಜೆ ಭವ್ಯ ರಥೋತ್ಸವ ಜರುಗಿತು. ಜೈ ಶ್ರೀರಾಮ ಜೈಕಾರ ಮೊಳಗಿತು. ದೇವಸ್ಥಾನದಿಂದ ಮುಖ್ಯರಸ್ತೆಯ ಮೂಲಕ ಐತಿಹಾಸಿಕ ಶಂಕರ ಬಾವಿಯವರೆಗೆ ಸಾಗಿದ ರಥದ ಮೇಲೆ ಭಕ್ತರು ಬಾಳೆಹಣ್ಣು, ಖಾರಿಕ್, ಕೊಬ್ಬರಿ ಅರ್ಪಿಸಿದರು. ಜಾಂಜ್ ಪಥಕ್, ಡೊಳ್ಳು ಕಲಾವಿದರು ಮನರಂಜನೆ ನೀಡಿದರು. ಹನುಮ ಮತ್ತು ಕೋತಿಗಳ ವೇಷಧಾರಿಗಳು ಆಕರ್ಷಕವಾಗಿ ಕಾಣಿಸಿಕೊಂಡರು. ಜಟ್ಟಿಗಳಿಂದ ಜಂಗೀ ನಿಕಾಲಿ ಕುಸ್ತಿಗಳು ಜರುಗಿದವು.

ಜಾತ್ರಾ ಸಮಿತಿ ಅಧ್ಯಕ್ಷ ತಮಣಪ್ಪ ಬದನೆಕಾಯಿ, ಉಪಾಧ್ಯಕ್ಷ ವರ್ಧಮಾನ ಸದಲಗಿ, ಕಾರ್ಯದರ್ಶಿ ಸಂಜಯ ಗುರವ, ಖಜಾಂಚಿ ಸಂತೋಷ ಗುರವ, ಪುರಸಭೆ ಸದಸ್ಯ ಪರಗೌಡ ಉಮರಾಣಿ, ವೈಜನಾಥ ಪಟ್ಟಣಶೆಟ್ಟಿ, ಬಸವರಾಜ ಖೋತ, ಕಾಂತು ಬಾಡಗಿ, ರಾಜಕುಮಾರ ಉಮರಾಣಿ, ಪ್ರಕಾಶ ಉಮರಾಣಿ, ಮಾರುತಿ ಗಸ್ತಿ, ಬಸವರಾಜ ಗುರವ, ಬಾಳಪ್ಪ ಗುರವ, ಹನುಮಂತ ಗಸ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net