ಹನುಮ ಜಯಂತಿ ಅಂಗವಾಗಿ ನಾಳಿದ್ದು ಬೃಹತ್ ಶೋಭಾ ಯಾತ್ರೆ

VISHAL AGRWAL- press meet (2)
Published on

ಹಾಸನ: ಹಿಂದು ಹಿತರಕ್ಷಣಾ ಪರಿಷತ್ ವತಿಯಿಂದ ಡಿಸೆಂಬರ್ 13ರ ಶುಕ್ರವಾರ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಹಿತರಕ್ಷಣಾ ಪರಿಷತ್ ಅಧ್ಯಕ್ಷ ವಿಶಾಲ್ ಅಗರ್ವಾಲ್ ತಿಳಿಸಿದರು.

ಶುಕ್ರವಾರ ನಗರದ ಕುವೆಂಪು ವೃತ್ತದಿಂದ ಆರಂಭವಾಗಲಿರುವ ಶೋಭಾಯಾತ್ರೆಗೆ ಪೌರಕಾರ್ಮಿಕರಿಂದ ಚಾಲನೆ ದೊರೆಯಲಿದೆ. ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ. ಅದೇ ದಿನ ಮಧ್ಯಾಹ್ನ ಒಂದು ಗಂಟೆಗೆ ಕುವೆಂಪು ವೃತ್ತದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಶೋಭಾ ಯಾತ್ರೆಯಲ್ಲಿ ಶ್ರೀ ಬಾಲರಾಮ ಮತ್ತು ಶ್ರೀ ಹನುಮಂತನ ಉತ್ಸವ ಮೂರ್ತಿಯ ಜತೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಹಿಂದು ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿಂದು ಹಿತರಕ್ಷಣಾ ಪರಿಷತ್ ಪ್ರಧಾನ ಕಾರ್ಯದರ್ಶಿ ಉಮೇಶ್, ಖಜಾಂಚಿ ಪವನ್, ತಾಲೂಕು ಸಂಚಾಲಕ ಅರುಣ್, ತಾಲೂಕು ಕಾರ್ಯದರ್ಶಿ ಅಕ್ಷಯ್, ಮೋಹನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net