ಹನುಮ ಎಲ್ಲರನ್ನೂ ಕಾಪಾಡಲಿ

13ATHANIGRAMIN1
Published on

ಅಥಣಿ ಗ್ರಾಮೀಣ: ಹನುಮ ಅಪಾರ ಶಕ್ತಿ ಹೊಂದಿರುವ ದೇವರು, ಹೀಗಾಗಿ ದೇಶದೆಲ್ಲೆಡೆ ಹನುಮನ ಅಪಾರ ಭಕ್ತರಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಅವರಖೋಡ ಗ್ರಾಮದ ಸ್ವಯಂಭೂ ಹನುಮಂತನ ಜಾತ್ರಾ ಮಹೋತ್ಸವಕ್ಕೆ ಶನಿವಾರ ಭೇಟಿ ನೀಡಿ ಹನುಮ ದೇವರ ದರ್ಶನ ಪಡೆದು ಮಾತನಾಡಿ, ಅವರಖೋಡ ಗ್ರಾಮದ ಸ್ವಯಂಭೂ ಹನುಮ ದೇವರಿಗೆ ವಿವಿಧೆಡೆ ಅಪಾರ ಭಕ್ತರಿದ್ದಾರೆ. ಆಂಜನೇಯನ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ಸಿಪಿಐ ಸಂತೋಷ ಹಳ್ಳೂರ, ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಗ್ರಾಪಂ ಉಪಾಧ್ಯಕ್ಷ ಬೈರಪ್ಪ ಕಾಂಬಳೆ, ಬಾಳಪ್ಪ ಪಾಟೀಲ, ಜ್ಯೋತಿಬಾ ಅಕ್ಕೋಳ, ಅಶೋಕ ಲಡಗಿ, ಬೀರಪ್ಪ ಲೋಕುರ, ಶಂಕರ ನಾಯಿಕ, ಬಾಳಪ್ಪ ಕಾಗವಾಡ, ಮಲ್ಲಪ್ಪ ದರೂರ, ಅಣ್ಣಯ್ಯ ಡಿಗ್ರಜ, ಎಸ್.ರಂಗರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net