ಮಹನೀಯರ ತ್ಯಾಗ, ಬಲಿದಾನ ಸ್ಮರಿಸೋಣ

15KMD-2
Published on

ಕೆ.ಎಂ.ದೊಡ್ಡಿ: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್, ಕ್ಯಾಪ್ಟನ್ ಕೆ.ಆರ್.ಮಲ್ಲರಾಜು ತಿಳಿಸಿದರು.


ಇಲ್ಲಿನ ಭಾರತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರೃ ಎಂದರೆ ನಿಜವಾದ ಅರ್ಥದಲ್ಲಿ ಬೆಳಕು ಎನ್ನಬಹುದು. ಕತ್ತಲೆ ಎಂಬ ಗುಲಾಮಗಿರಿ ಮತ್ತು ದಾಸ್ಯವನ್ನು ಹೋಗಲಾಡಿಸಿ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರನ್ನು ನಾವು ಸ್ಮರಿಸಬೇಕು ಎಂದರು.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀ ಎಜುಕೇಷನ್ ಟ್ರಸ್ಟ್‌ನ ಅಂಗ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಟಿ.ನಾಗೇಂದ್ರ, ಪ್ರೊ.ಎಸ್.ನಾಗರಾಜು, ಡಾ.ಚಂದನ್, ಡಾ.ತಮಿಜ್‌ಮಣಿ, ಸಿ.ವಿ.ಮಲ್ಲಿಕಾರ್ಜುನ, ಡಾ.ಎಸ್.ಎಲ್.ಸುರೇಶ್, ಡಾ.ಬಾಲಸುಬ್ರಮಣ್ಯಂ, ಮಂಜು ಜೇಕಬ್, ನಾಗಮಾದಯ್ಯ, ಪಿ.ರಾಜೇಂದ್ರರಾಜೇ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net