

ಕಲಬುರಗಿ: ಜಿಲ್ಲಾದ್ಯಂತ ಸುದ್ದಿ ಮಾಡಿದ್ದ ಹನಿಟ್ರ್ಯಾಪ್ ಪ್ರಕರಣದ ಎರಡನೇ ದೂರಿನ ಆರೋಪಿಯನ್ನು ಬಂಧಿಸಿದ ಪೊಲೀಸರು, ಇನ್ನೊಬ್ಬನ ಮನೆ ಶೋಧ ಮಾಡಿ ಹಣದೊಂದಿಗೆ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ರಾಜು ಲೇಂಗಟಿಯನ್ನು ಮಂಗಳವಾರ ಬಂಧಿಸಿ ಸುಲಿಗೆ ಮಾಡಿದ 2.50 ಲಕ್ಷ ರೂ. ವಶಕ್ಕೆ ಪಡೆದು ೧೪ ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರಕರಣ ಮೊದಲ ಆರೋಪಿ ಪ್ರಭುಲಿಂಗ ಹಿರೇಮಠ ಮನೆಯನ್ನು ನ್ಯಾಯಾಲಯ ನಿರ್ದೇಶನದಂತೆ ಶೋಧ ಮಾಡಿದ್ದು, 1.49 ಲಕ್ಷ ರೂ. ನಗದು, ೫೫ ಗ್ರಾಂ ಬಂಗಾರ ಹಾಗೂ ಒಂದು ಮೊಬೈಲ್ ಸಿಕ್ಕಿದೆ. ಹನಿಟ್ರ್ಯಾಪ್ ಮೂಲಕ ಹಣ ಸುಲಿಗೆ ಮಾಡಿದ ಬಗ್ಗೆ ವ್ಯಾಪಾರಿಯೊಬ್ಬರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸೆ.28ರಂದು ದೂರು ದಾಖಲಿಸಿದ್ದರು.