ಹನಿಟ್ರಾೃಪ್ ಪ್ರಸ್ತಾಪಿಸಿದ್ದಕ್ಕೆ ಯತ್ನಾಳ್ ಉಚ್ಚಾಟನೆ:  ಕಾಂಗ್ರೆಸ್ ಶಾಸಕ ಹರೀಶ್‌ಗೌಡ

k-harishgowda
Published on

ಮೈಸೂರು: ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಹರೀಶ್‌ಗೌಡ ಅಚ್ಚರಿಯ ಹೇಳಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಪಕ್ಷದ ಶಿಸ್ತು ಪಾಲಿಸುತ್ತಿರಲಿಲ್ಲ. ಸದನದಲ್ಲೂ ಯಾರಿಗೂ ಗೌರವ ಕೊಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಸೂಕ್ತ ಕ್ರಮ ಕೈಗೊಂಡಿದೆ. ಇದು ಎಲ್ಲ ಪಕ್ಷದವರಿಗೂ ಪಾಠವಾಗಬೇಕು. ನಮ್ಮಂತಹ ಕಿರಿಯ ಶಾಸಕರಿಗೂ ಇದು ಎಚ್ಚರಿಕೆಯಾಗಿದೆ ಎಂದರು.

ಸತೀಶ್ ಜಾರಕಿಹೋಳಿ ಅವರು ಎಚ್.ಡಿ.ಕುಮಾರಸ್ವಾಮಿ ಭೇಟಿ ವಿಚಾರ ನನಗೂ ಅಚ್ಚರಿ ತಂದಿದೆ. ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಅವರೇ ಬೆಂಗಳೂರಿಗೆ ಬಂದ ಮೇಲೆ ಹೇಳುತ್ತೇನೆ ಅಂತಾ ತಿಳಿಸಿದ್ದಾರೆ.

ಕಾದು ನೋಡೋಣ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net