ಹನಿ ನೀರಾವರಿ ಪದ್ಧತಿಯಿಂದ ಹೆಚ್ಚು ಉತ್ಪಾದನೆ

25 Hulsur 1
ಹುಲಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳಿಗೆ ತೋಟಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕಿ ವೈಜಯಂತಿ ಕದಮ ಮಾತನಾಡಿದರು. ಶ್ರೀಧರ, ಸೂರ್ಯಕಾಂತ ಪಾಟೀಲ, ಸೂರ್ಯಕಾಂತ ಅಡಕೆ ಇತರರಿದ್ದರು.
Published on

ಹುಲಸೂರು: ಹನಿ ನೀರಾವರಿ ಪದ್ಧತಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಜತೆಗೆ ಹೂ, ಹಣ್ಣು ಮರಗಳನ್ನು ಬೆಳೆಯಬಹುದು ಎಂದು ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕಿ ವೈಜಯಂತಿ ಕದಮ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆ ಹಾಗೂ ಜಿಪಂ ಬೀದರ್ ಸಹಯೋಗದಲ್ಲಿ ೨೦೨೪-೨೫ ನೇ ಸಾಲಿನ ಸಮಗ್ರ ತೋಟಗಾರಿಕೆ ಯೋಜನೆಯಡಿ ಶಾಲಾ ಮಕ್ಕಳಿಗಾಗಿ ತೋಟಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯದಿಂದ ಇರಬೇಕಾದರೆ ರೈತರು ತಮ್ಮ ತೋಟದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಔಷಧ ಇಲ್ಲದೆ ಹನಿ ನೀರಾವರಿಯಿಂದ ಬೆಳೆದ ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಬೇಕು ಎಂದು ಹೇಳಿದರು.

ಮಕ್ಕಳು ತೋಟಗಾರಿಕೆ ಬೆಳೆ ಬೆಳೆಯುವ ಪದ್ಧತಿ ಹಾಗೂ ವಿವಿಧ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆವುದು ಅವಶ್ಯಕವಾಗಿದೆ ಎಂದರು.

ಮುಖ್ಯಶಿಕ್ಷಕ ಸೂರ್ಯಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳಿಗೆ ತರಬೇತಿ ಕೈಪಿಡಿ ಹಾಗೂ ತೋಟಗಾರಿಗೆ ಬೀಜಗಳ ಕಿಟ್ ವಿತರಿಸಲಾಯಿತು.

ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಶ್ರೀಧರ, ಅಶ್ವಿನಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಅಡಕೆ, ನಾಗನಾಥ, ನಾಗಶೆಟ್ಟಿ, ಪರ್ವೇಜ್ ಮೋಮಿನ್, ರೇಣುಕಾ ಸಜ್ಜನಶೆಟ್ಟಿ, ಎಂ.ಡಿ.ಆಜಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net