

ಹನಗೋಡು: ಹನಗೋಡು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತರಾದ ಚನ್ನಯ್ಯ ಅಧ್ಯಕ್ಷರಾಗಿ ಅವಿರೋಧವಾಗಿ
ಆಯ್ಕೆಯಾದರೆ, ಜಯಲಕ್ಷ್ಮೀ ಒಂದು ಮತದ ಅಂತರದ ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಎಸ್.ಸಿ.ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚನ್ನಯ್ಯ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಎನ್.ಉಮೇಶ್ ಕಾರ್ಯನಿರ್ವಹಿಸಿದರು.
ಉಪಾಧ್ಯಕ್ಷ ಸ್ಥಾನ ಬಿಸಿಎಂ-ಎ ಮಹಿಳೆಗೆ ಮೀಸಲಾಗಿದ್ದು, 7 ಮತ ಪಡೆದ ಮಾಜಿ ಜಯಲಕ್ಷ್ಮೀ ವಿಜಯಶಾಲಿಯಾದರು. ಪ್ರತಿಸ್ಪರ್ಧಿ ನೂರ್ ಜಾನ್ 6 ಮತ ಪಡೆದು ಸೋಲು ಅನುಭವಿಸಿದರು. ಎಲ್ಲ 13 ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದರು.
ಪಿಡಿಒ ರಾಮಣ್ಣ, ಜೆಡಿಎಸ್ ಮುಖಂಡರಾದ ಕಿರಂಗೂರು ಬಸವರಾಜು, ಎಚ್.ಆರ್.ರಮೇಶ್, ರವಿ, ಮಲ್ಲೇಶ್, ಪಾಪಯ್ಯ, ವೆಂಕಟಯ್ಯ, ಹರೀಶ, ಚನ್ನಾಜಯ್ಯ ಇತರರಿದ್ದರು.
ಹನಗೋಡು ನಿವಾಸಿ ಚೆನ್ನಯ್ಯ 15 ವರ್ಷಗಳಿಂದ ರಸ್ತೆ ಬದಿಯಲ್ಲಿ ಎಲೆ, ಅಡಕೆ ವ್ಯಾಪಾರ ಮಾಡುತ್ತಿದ್ದು, ಎರಡು ಬಾರಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ಜಯಲಕ್ಷ್ಮೀ ಇದೀಗ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.