ಹದಿಹರೆಯದವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

bdr6
ಸಂತಪುರ ಮುರಾರ್ಜಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಹದಿಹರೆಯದ ಮಕ್ಕಳಿಗೆ ಸಮಗ್ರ ಆರೋಗ್ಯ ಶಿಕ್ಷಣ ಮಾಲಿಕೆ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಪ್ರಭು ಉದ್ಘಾಟಿಸಿದರು. ಶ್ರೀನಿವಾಸ ಬಿರಾದಾರ, ವಿಜಯಲಕ್ಷಿö್ಮÃ, ದಯಾನಂದ ಸಂಗಮ, ರಮೇಶ ಸೂರ್ಯವಂಶಿ, ಇಮಾನ್‌ವೆಲ್, ಸ್ವರೂಪಾವತಿ, ಎಸ್.ಲಕ್ಷಿö್ಮÃ, ರಾಜಕುಮಾರ ಶಿಂಧೆ ಇತರರಿದ್ದರು.
Published on

ಔರಾದ್: ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುವುದರಿAದ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಿದೆ ಎಂದು ಬೀದರ್ ಶಾರದಾ ತರಬೇತಿ ಕೇಂದ್ರದ ಜಿಲ್ಲಾ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಹೇಳಿದರು.

ಸಂತಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೀದರ್‌ನ ಫ್ಯಾಮಿಲಿ ಪ್ಲಾÈನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹದಿಹರೆಯದ ಮಕ್ಕಳಿಗೆ ಸಮಗ್ರ ಆರೋಗ್ಯ ಶಿಕ್ಷಣ ಮಾಲಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹರಿಹರೆಯದ ಮಕ್ಕಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾಗಿ ವ್ಯಸನಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಅವರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಹರಿಹರೆಯದ ವಿದ್ಯಾರ್ಥಿಗಳು ಸಮಸ್ಯೆಗಳಿಂದ ಹೊರಬರುವ ಮಾರ್ಗಗಳು, ಕಲಿಕೆ ಮತ್ತು ಗೊಂದಲಗಳ ನಿರ್ವಹಣೆಯ ಬಗ್ಗೆ ಸಂವಾದದ ಮೂಲಕ ಅನೇಕ ಚಟುವಟಿಕೆ ನಡೆಸಿ ಮಾಹಿತಿ ನೀಡಿದರು. ಎಫ್‌ಪಿಎಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ಹದಿಹರೆಯದ ವಯಸ್ಸು ಬಹಳಷ್ಟು ಚಂಚಲವಾಗಿರುತ್ತದೆ. ಹೀಗಾಗಿ ಮಕ್ಕಳು ದುಶ್ಚಟಗಳಿಂದ ದೂರವಿದ್ದು, ಗುರುಹಿರಿಯರ ಮಾರ್ಗದರ್ಶನ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದÀರು.

ಎಫ್‌ಪಿಎಐ ಆಪ್ತ ಸಮಾಲೋಚಕಿ ವಿಜಯಲಕ್ಷಿö್ಮÃ ಮಾತನಾಡಿದರು. ದಯಾನಂದ ಸಂಗಮ, ರಮೇಶ ಸೂರ್ಯವಂಶಿ, ಶಿವಕುಮಾರ, ರಾಜಕುಮಾರ, ಸ್ವರೂಪಾವತಿ, ಎಸ್.ಲಕ್ಷಿö್ಮÃ, ರಾಜಕುಮಾರ ಶಿಂಧೆ , ಸಂಗೀತಾ, ಮಂಜುಳಾ, ಸುನೀಲ, ಸಂಜೀವಕುಮಾರ ಇತರರಿದ್ದರು. ಶಿಕ್ಷಕ ಇಮಾನವೆಲ್ ಮಾನಕರ ವಂದಿಸಿದರು. ರಮೇಶ ಸೂರ್ಯವಂಶಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net