ಹದಿಹರೆಯದ ಆಕರ್ಷಣೆಗಳಿಗೆ ಒಳಗಾಗದೇ ಉತ್ತಮ ವಿಚಾರಗಳನ್ನು ತಮ್ಮದಾಗಿಸಿಕೊಳ್ಳಬೇಕು: ವಿ ಮಧುಸೂದನ್

ಹದಿಹರೆಯದ ಆಕರ್ಷಣೆಗಳಿಗೆ ಒಳಗಾಗದೇ ಉತ್ತಮ ವಿಚಾರಗಳನ್ನು ತಮ್ಮದಾಗಿಸಿಕೊಳ್ಳಬೇಕು: ವಿ ಮಧುಸೂದನ್
Published on

ಹಾಸನ: ಹದಿಹರೆಯದ ಆಕರ್ಷಣೆಗಳಿಗೆ ಒಳಗಾಗದೇ ಉತ್ತಮ ವಿಚಾರಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಆಕಾಶವಾಣಿ ಪ್ರಸಾರ ನಿರ್ವಹಣಾಧಿಕಾರಿ ಅರಕಲಗೂಡು ವಿ ಮಧುಸೂದನ್ ಅಭಿಪ್ರಾಯಪಟ್ಟರು.

ನಗರದ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ನೇಹ ಸಂಗಮ ಹಾಗೂ ಮಾಧ್ಯಮ ಲೋಕದ ಉದ್ಯೋಗಕ್ಕೆ ಪೂರ್ವಭಾವಿ ತಯಾರಿಗಳು ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಹಂತದಲ್ಲಿಯೂ ಕಲಿಕೆ ಬಹಳಷ್ಟಿರುತ್ತದೆ. ಯಾವ ಯಾವ ಹಂತದಲ್ಲಿ ಏನನ್ನು ಕಲಿಯಬೇಕು ಎಂಬುದನ್ನು ರೂಢಿಸಿಕೊಳ್ಳಬೇಕು ಎಂದರು.

ಪದವಿಯ ವಯಸ್ಸು ಕಠಿಣವಾದ ಮನಸ್ಸು. ಜೀವನ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಕಲಿಕೆಗೆ ಇದು ಒಳ್ಳೆಯ ಅವಕಾಶವಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಓದುವುದನ್ನು ಅಭ್ಯಾಸಿಕೊಳ್ಳಿ, ಕಂಪ್ಯೂಟರ್ ಜ್ಞಾನ ರೂಢಿಸಿಕೊಳ್ಳಿ. ವೃತ್ತಿಗೆ ಸಂಬಂಧಿಸಿದನ್ನು ಮತ್ತು ಇನ್ನಿತರೆ ವಿಚಾರಗಳ ಬಗ್ಗೆ ಓದು ತಿಳಿದುಕೊಳ್ಳಬೇಕು. ಯಾವುದೇ ರೀತಿಯ ಓದು ವ್ಯರ್ಥವಾಗುವುದಿಲ್ಲ. ಕಾಲೇಜಿನ ದಿನಗಳಲ್ಲಿ ನಾನು ಗ್ರಂಥಾಲಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.

ಮುಂದುವರೆದಂತೆ, ವ್ಯಕ್ತಿತ್ವ ಬದಲಾಗುವುದು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯಿಂದ. ಗುರಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ ವಿದ್ಯಾರ್ಥಿಗಳು. ಪತ್ರಿಕಾರಂಗ ವಿಸ್ತಾರವಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ, ಜಿಲ್ಲೆಯಲ್ಲಿ ಪ್ರಸಾರವಾಗುತ್ತಿರುವ ಆರ್‌ಎನ್‌ಐ ಮಾಹಿತಿಯ ಪ್ರಕಾರ ಮಾಸಿಕ, ದೈನಿಕ, ಸಾಪ್ತಾಹಿಕಗಳ ಅಂಕಿಅಂಶವನ್ನು ನೀಡಿದರು. ಬಾನುಲಿ ಕೇಂದ್ರಗಳ ಅಂಕಿ ಅಂಶವನ್ನು ಸಹ ನೀಡಿದರು.

ಮಾಧ್ಯಮಕ್ಕೆ ಹೋಗಿ ಕಾರ್ಯನಿರ್ವಹಿಸಲು ಬರವಣಿಗೆ ಬಹಳ ಮುಖ್ಯವಾಗುತ್ತದೆ. ಅದನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಬೇಕು. ಪತ್ರಿಕೆ ಮತ್ತು ಮಾಧ್ಯಮಕ್ಕೆ ಹೊಂದುವ ಹಾಗೆಯೇ ಬರೆಯಬೇಕು. ಬರಹಗಾರರ ಕೊರತೆ ಹೆಚ್ಚಾಗಿಯೇ ಇದೆ. ಒಳ್ಳೆಯ ಓದುಗರಾದರೆ ಒಳ್ಳೆಯ ಬರಹಗಾರರಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನತಾಮಾಧ್ಯಮ ದಿನಪತ್ರಿಕೆ ಸಂಪಾದಕ ಆರ್.ಪಿ. ವೆಂಕಟೇಶಮೂರ್ತಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಬರುವಂತಹ ವಿಷಯಗಳನ್ನು ಕುರಿತು ಪ್ರತಿಕ್ರಿಯಿಸುವವರ ಸಂಖ್ಯೆ ಕಡಿಮೆಯಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರ ಸಂಖ್ಯೆ ಇಳಿಮುಖವಾಗಿದೆ. ಕರ್ತವ್ಯ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಜೀವಂತ ಪ್ರತಿಕ್ರಿಯೆ ಇಲ್ಲದಿರುವುದ ವಿಷಾದನೀಯವಾಗಿದೆ. ಸಂಘಟನೆಗಳು ಸತ್ವ ಇಲ್ಲದಂತಾಗಿವೆ. ಯುವಜನತೆ ಪ್ರತಿಕ್ರಿಯಿಸುವ ಹೊಣೆಯನ್ನು ತೆಗೆದುಕೊಳ್ಳಬೇಕು. ಪತ್ರಿಕೋದ್ಯಮ ಒಂದು ಅಸ್ತ್ರ ಅದನ್ನು ಸರಿಯಾದ ರೀತಿ ಬಳಕೆಮಾಡಿಕೊಳ್ಳಬೇಕು. ಕುಲ್‌ದೀಪ್ ನಾಯರ್ ಅವರನ್ನು ಈ ಸಂದರ್ಭದಲ್ಲಿ ನೆನೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಟಿ.ಪಿ.ಪುಟ್ಟರಾಜು, ಪತ್ರಕರ್ತನ ವೃತ್ತಿಗೆ ಬಂದ ಮೇಲೆ ಅಲ್ಲಿ ಪರಿಶ್ರಮವಿರುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ರಂಗ. ಇದಕ್ಕೆ ತನ್ನದೇ ಆದ ಜವಾಬ್ದಾರಿಯಿದೆ. ಎಲ್ಲಾ ರೀತಿಯ ಆಯಾಮಗಳಲ್ಲಿಯೂ ಪತ್ರಕರ್ತ ಪರಿಪೂರ್ಣನಾಗಬೇಕು. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಾವಿರಾರು ಪತ್ರಿಕೆಗಳ ಒಟ್ಟು ಆಶಯ ಮನುಷ್ಯನ ತಿಳಿವಳಿಕೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಒತ್ತು ನೀಡುವುದೇ ಆಗಿದೆ ಎಂದರು.

ಉಪನ್ಯಾಸಕಿ ರಶ್ಮಿ ಎ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿಗಳನ್ನಾಡಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥನೆ ಮಾಡಿದರು. ಕೀರ್ತಿಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರಚನಾ ಮತ್ತು ಅನಿತಾ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ಹೇಮಾ ಮತ್ತು ಪ್ರೀತಿ ಪರಿಚಯಿಸಿದರು. ಚಂದನ್ ವಂದಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ.ಎಂ.ಬಿ.ಇರ್ಷಾದ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಉಪನ್ಯಾಸಕಿ ಶೃತಿ ಕೆ.ಎ.ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಜ್ಯೋತಿ, ರಾಧಿಕ, ಪವಿತ್ರ, ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕ ಚಂದ್ರಕಲಾ, ಸಂಸ್ಕೃತ ವಿಭಾಗದ ಮುಖ್ಯಸ್ಥೆ ಪ್ರೊ. ವೀಣಾ, ಕನ್ನಡ ವಿಭಾಗದ ಮುಖ್ಯಸ್ಥರಾದ ದೇವರಾಜು, ಹಿರಿಯ ವಿದ್ಯಾರ್ಥಿಗಳಾದ ಎಂ.ಡಿ. ಕಾರ್ತಿಕ್ , ಎಂ. ಕಾವ್ಯ, ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net