ಹದಿನೈದು ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ

Teachers day
Published on

ಕೊಪ್ಪಳ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು, ಜಿಲ್ಲೆಯ 15 ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.


ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೊಪ್ಪಳ ತಾಲೂಕಿನ ಬಿಕನಳ್ಳಿ ಶಾಲೆಯ ಎಚ್.ಕವಿತಾ ನಾಗನೂರು, ಹಿರೇ ಸಿಂದೋಗಿಯ ರೋಟರಿನಗರ ಶಾಲೆ ಗುರುಸ್ವಾಮಿ ಆರ್., ಗಂಗಾವತಿ ತಾಲೂಕಿನ ಆಶ್ರಯ ಕಾಲನಿ ಶಾಲೆಯ ಈರಮ್ಮ, ಕುಷ್ಟಗಿ ತಾಲೂಕಿನ ಬಸಾಪುರ ಶಾಲೆಯ ನಟರಾಜ ಸೋನಾರ್, ಕುಕನೂರು ತಾಲೂಕಿನ ಚನಪನಳ್ಳಿ ಶಾಲೆಯ ಗಿರಿಜಾ ಧರ್ಮಸಾಗರ ಆಯ್ಕೆಯಾಗಿದ್ದಾರೆ.


ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಕೊಪ್ಪಳ ತಾಲೂಕಿನ ಹಲಗೇರಿ ಶಾಲೆ ಪರಶುರಾಮ ಬಿಲಂಕರ್, ಗಂಗಾವತಿ ತಾಲೂಕಿನ ವಿರುಪಾಪುರ ಶಾಲೆಯ ಜಿ.ಶ್ರೀದೇವಿ ಕೃಷ್ಣಪ್ಪ, ಕುಷ್ಟಗಿ ತಾಲೂಕಿನ ಗುಡದೂರು ಶಾಲೆಯ ಜಹಾನ್‌ಆರಾ, ಕಂದಕೂರು ಶಾಲೆಯ ಶಶಿಕಲಾ ಪಾಟೀಲ್, ಯಲಬುರ್ಗಾ ತಾಲೂಕಿನ ಬಂಡಿ ಶಾಲೆಯ ಜಯಶ್ರೀ ಕೊತಬಾಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಪ್ರೌಢ ಶಾಲಾ ವಿಭಾಗದಲ್ಲಿ ಕನಕಗಿರಿ ತಾಲೂಕಿನ ಸೋಮನಾಳ ಶಾಲೆ ರಾಘವೇಂದ್ರ ಕಂಠಿ, ಕೊಪ್ಪಳ ತಾಲೂಕಿನ ಹ್ಯಾಟಿ ಶಾಲೆಯ ಶರಣ ಬಸಪ್ಪ ಮಣ್ಣೂರು, ಗಂಗಾವತಿ ತಾಲೂಕಿನ ಗುಂಡೂರು ಶಾಲೆಯ ಕರಿಯಪ್ಪ ದೂಡ್ಯಾಳ, ಕುಷ್ಟಗಿ ತಾಲೂಕಿನ ನವಲಳ್ಳಿ ಶಾಲೆಯ ಪರಶುರಾಮ, ಯಲಬುರ್ಗಾ ತಾಲೂಕಿನ ಹಿರೇ ಮ್ಯಾಗೇರಿ ಶಾಲೆಯ ನಿಂಗಪ್ಪ ಶೇಗುಣಸಿಗೆ ಪ್ರಶಸ್ತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net