ಹದಗೆಟ್ಟ ರೈಲ್ವೆ ಮೇಲ್ಸೆತುವೆ ರಸ್ತೆ

16ydg05
Published on


ಯಾದಗಿರಿ: ನಗರದ ಹೊರ ವಲಯದ ಭೀಮಾ ಬ್ಯಾರೇಜ್ಗೆ ಸಂಪಕರ್ಿಸುವ ರೈಲ್ವೆ ಮೇಲ್ಸೆತುವೆ ರಸ್ತೆಯ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.


ರಸ್ತೆಯ ಮೇಲೆ ಆಳವಾದ ತಗ್ಗುಗಳು ಬಿದ್ದಿವೆ. ಇದರಿಂದ ರಸ್ತೆ ಮೇಲ್ಸೆತುಗೆ ಧಕ್ಕೆ ಉಂಟಾಗುವ ಆತಂಕ ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ. ಗುಲಸರಂ ಕ್ರಾಸ್ನಿಂದ ಭೀಮಾ ಬ್ಯಾರೇಜ್ ಮುಖಾಂತರ ಈ ಬೈಪಾಸ್ ರಸ್ತೆ ಜಿಲ್ಲಾ ಕ್ರೀಡಾಂಗಣಕ್ಕೆ ಸಂಪಕರ್ಿಸುತ್ತೆದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಶಹಾಪುರ ಮತ್ತು ಸುರಪುರ ತಾಲೂಕುಗಳ ಕಡೆಗೆ ಹೋಗಬೇಕಾದರೆ ಈ ರಸ್ತೆಯ ಮೂಲಕ ಸಂಚರಿಸುತ್ತಾರೆ. ಆದರೂ ಸಹ ಅವರ ಗಮನಕ್ಕೆ ಈ ಸಮಸ್ಯೆ ಬಂದಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.

ಅಲ್ಲದೆ ಬೃಹತ್ ಗಾತ್ರದ ಟ್ರಕ್ಗಳು ಮತ್ತು ಸಿಮೆಂಟ್ ಲಾರಿಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ಯಾದಗಿರಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಈ ಬೈಪಾಸ್ ರಸ್ತೆ ಸುಗಮ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಸುಧಾರಣೆಗೆ ಗಮನ ಹರಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net