ಹದಗೆಟ್ಟ ರಸ್ತೆ, ಸಂಚಾರ ಕಷ್ಟ

10 ANG 1
Published on

ಅಣ್ಣಿಗೇರಿ: ಪಟ್ಟಣದ ಜನ್ನತ್​ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳಂತಾಗುತ್ತವೆ. ಇದರಿಂದ ಜನರು, ವಾಹನ ಸವಾರರು ಪರದಾಡುವಂತಾಗುತ್ತದೆ.

ಪುರಸಭೆ ವ್ಯಾಪ್ತಿಯಲ್ಲಿರುವ ಜನ್ನತ್​ನಗರದಲ್ಲಿ 75 ಕುಟುಂಬಗಳು 25 ವರ್ಷಗಳಿಂದ ವಾಸಿಸುತ್ತಿವೆ. ಇಲ್ಲಿನ ನಿವಾಸಿಗಳು ಪುರಸಭೆಗೆ ಎಲ್ಲ ಆಸ್ತಿ ತೆರಿಗೆ ಪಾವತಿಸುತ್ತಾರೆ. ಆದರೆ, ಉತ್ತಮ ರಸ್ತೆ, ಚರಂಡಿ ಮತ್ತಿತರ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಚರಂಡಿ ನೀರು ಒಂದೇ ಕಡೆ ನಿಂತು ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ರೈತರು, ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳು ದೂರುತ್ತಾರೆ. ಒಂದು ತಿಂಗಳ ಹಿಂದೆ ಜನ್ನತ್​ನಗರಕ್ಕೆ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ತಹಸೀಲ್ದಾರ್ ಕೊಟ್ರೇಶ ಗಾಳಿ ಅವರು ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇನ್ನೂವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಕೂಡಲೆ ರಸ್ತೆ ಅಭಿವೃದ್ಧಿಪಡಿಸಿ, ಚರಂಡಿಗಳನ್ನು ನಿರ್ವಿುಸಬೇಕು. ಇಲ್ಲದಿದ್ದರೆ ಅಣ್ಣಿಗೇರಿ ಪುರಸಭೆ ಮುಂದೆ ಹೋರಾಟ ಮಾಡಲಾಗುವುದು ಎಂದು ನಿವಾಸಿಗಳಾದ ಮಹಾಂತೇಶ ಹುಲ್ಲಾರ, ಎಸ್. ಸೋಮಣ್ಣವರ, ಎಂ.ಡಿ. ಧಾರವಾಡ, ಎನ್.ಜಿ. ಉಮಚಗಿ, ಕರಿಯಪ್ಪ ಕಾಳಪ್ಪನವರ, ಆರ್.ಎನ್. ಧಾರವಾಡ, ಜಹಾಂಗೀರ್​ಸಾಬ್ ಸಂಗಟಿ, ಮಾಬುಸಾಬ್ ಮೆಲ್ದಾರ್, ಡಿ.ಎಚ್. ಠಾಣೆದ, ಬಸಪ್ಪ ಕುರ್ತಕೋಟಿ, ಶಂಕರಪ್ಪ ವರವಿ ತಿಳಿಸಿದ್ದಾರೆ.

ಸಂಬಂಧಪಟ್ಟ ಉನ್ನತ ಅಧಿಕಾರಿಗಳೊಂದಿಗೆ ರ್ಚಚಿಸಿ ಜನ್ನತ್​ನಗರ ನೀಲಿನಕ್ಷೆ ನೋಡಿ ಮುಂಬರುವ ದಿನಗಳಲ್ಲಿ ಸಮಸ್ಯೆ ಪರಿಹರಿಸುತ್ತೇನೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net