

ಚಿತ್ರದುರ್ಗ:ನಗರದ ನಿವಾಸಿ ರೇಣುಕಾಸ್ವಾಮಿ ಹತ್ಯೆಯನ್ನು ಖಂಡಿಸಿ ವೀರಶೈವ ಜಂಗಮ ಸಮಾಜ ಸೇರಿದಂತೆ ನಾನಾ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಭಾರೀ ಪ್ರತಿಭಟನೆ ನಡೆಯಿತು.
ನಗರದ ನೀಲಕಂಠೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾದ ಪ್ರತಿಭಟನೆ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿತು. ಬಳಿಕ ನಗರದ ವೀರ ವನಿತೆ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದ ಪ್ರಮುಖರು,ಹತ್ಯೆ ಖಂಡಿಸಿ,ನಟ ದರ್ಶನ್ ಮತ್ತವರ ಸಹಚರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದರ್ಶನ್ ಮತ್ತಿತರ ವಿರುದ್ಧ ವ್ಯಾಪಕವಾಗಿ ಘೋಷಣೆಗಳನ್ನು ಕೂಗಿದರು.
ಮೃತನ ಆತ್ಮಹತ್ಯೆಗೆ ಶಾಂತಿ ಕೋರಿ ಕೆಲ ಕಾಲ ಮೌನಾಚರಣೆ ನಡೆಸಿದರು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ವೇಳೆ ದರ್ಶನ್ ಭಾವಚಿತ್ರ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಎಂಎಲ್‌ಸಿ ಕೆ.ಎಸ್.ನವೀನ್,ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ಎಸ್.ಕೆ.ಬಸವರಾಜನ್,ಛಲವಾದಿ ಗುರುಪೀಠದ ಶ್ರೀ ಬಸವ ನಾಗೀದೇವ ಸ್ವಾಮೀಜಿ,ಜಿಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,ಪಟೇಲ್ ಶಿವಕುಮಾರ್,ಕಲ್ಲೇಶಯ್ಯ,ಕೆ.ಎಂ.ವೀರೇಶ್,ಕರವೇ ರಮೇ ಶ್,ರುದ್ರೇಶ್,ಮರುಳಾರಾಧ್ಯ,ನಾಗರಾಜ್‌ಸಂಗಂ,ಶಂಕರ್,ನಗರಸಭೆ ಸದಸ್ಯ ಸುರೇಶ್,ಷಡಕ್ಷರಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.