ಹತ್ಯೆ ಖಂಡಿಸಿ, ಐಎಂಎ ಪ್ರತಿಭಟನೆ

17 YERRISWAMY 02
Published on

ಬಳ್ಳಾರಿ : ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ, ಭಾರತೀಯ ವೈದ್ಯಕೀಯ ಸಂಘದಿಂದ ಇಲ್ಲಿನ ಐಎಂಎ ಹಾಲ್‌ನಿಂದ ನೂತನ ಜಿಲ್ಲಾಧಿಕಾರಿ ಕಚೇರಿಯವರೆಗೆ ರ‌್ಯಾಲಿ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಮನವಿ ಸಲ್ಲಿಸಿದರು.
ಅಧ್ಯಕ್ಷ ಡಾ. ಡಿ. ಶ್ರೀನಿವಾಸಲು ಮಾತನಾಡಿ, ವೈದ್ಯರ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಗಳ ಮೇಲೆ ನಡೆಯುವ ದೌರ್ಜನ್ಯವನ್ನು ನಡೆಸುವವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮಜರುಗಿಸಬೇಕು. ಹತ್ಯೆಯಾದ ವಿದ್ಯಾರ್ಥಿನಿಯ ಪ್ರಕರಣವನ್ನು ಸಿಬಿಐಗೆ ವಹಿಸಿ, ನಿಪಕ್ಷಪಾತದಿಂದ ತನಿಖೆ ನಡೆಸಬೇಕು. ಎಲ್ಲ ಆಸ್ಪತ್ರೆಗಳ ಭದ್ರತಾ ಪ್ರೊಟೋಕಾಲ್‌ಗಳು ವಿಮಾನ ನಿಲ್ದಾಣಗಳಲ್ಲಿ ಅನುಸರಿಸುವ ಕಾರ್ಯಸೂಚಿಗಳಿಗಿಂತ ಕಿಂಚಿತ್ತೂ ಕಡಿಮೆಯಿರಬಾರದು. ಕಡ್ಡಾಯ ಭದ್ರತಾ ಕಾರ್ಯಸೂಚಿಗಳಿಂದ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಬೇಕು. ದುಷ್ಕೃತ್ಯಕ್ಕೆ ಬಲಯಾದ ವೈದ್ಯೆಗೆ ನ್ಯಾಯವನ್ನು ಒದಗಿಸಬೇಕು. ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನಾ ನಿರತ ವೈದ್ಯರ ಮೇಲೆ ಹಲ್ಲೆ ಹಾಗೂ ವಿದ್ವಾಂಸಕ ಕೃತ್ಯ ನಡೆಸಿದ ಗೊಂಡಾಗಳನ್ನು ಸಮಾಜಘಾತುಕರು ಎಂದು ಗುರುತಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಡಾ.ರಾಘವೇಂದ್ರ, ಡಾ. ಸಂಗೀತ ಕಟ್ಟಿಮನಿ, ಡಾ. ಗೋವರ್ಧನರೆಡ್ಡಿ, ಡಾ. ವಿಜಯಭಾಸ್ಕರರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net