ಹತ್ತು ಲಾನುಭವಿಗಳ ಆಯ್ಕೆ

06rajesh9
Published on

ಚಾಮರಾಜನಗರ: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬಗರ್‌ಗಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ 10 ಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ 2021-22 ನೇ ಸಾಲಿನ ನಮೂನೆ -57 ನೇ ಕಾಲಂ ನಡಿ ಮೊದಲನೇ ಹಂತದಲ್ಲಿ ಕಡತಗಳ ಪರಿಶೀಲನೆ ನಡೆಯಿತು. ಹರದನಹಳ್ಳಿ ಹೋಬಳಿಯಲ್ಲಿ 10 ಅರ್ಜಿಗಳು ಸಲ್ಲಿಕೆಯಾಗಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಪರಿಶೀಲಿಸಿ ಸಾಗುವಳಿ ಚೀಟಿ ಪಡೆಯಲು ಅನುಮೋದಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, 10 ಅರ್ಜಿದಾರು ಸಕಾಲಕ್ಕೆ ಹಣಪಾವತಿಸಿ ಸಾಗುವಳಿಪತ್ರ ಪಡೆಯಬೇಕು. ಸಂಬಂಧಪಟ್ಟ ಅಧಿಕಾರಿಗಳು ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಬಗರ್‌ಗಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಬಿಸಲವಾಡಿರವಿ, ಮಲ್ಲಿಕ್ ಚನ್ನೇಗೌಡ, ಮಹಾಲಿಂಗು, ತಹಸೀಲ್ದಾರ್ ಗಿರಿಜಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net