

ಚಿಕ್ಕಮಗಳೂರು: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಎರಡು ಲಕ್ಷ ರೂ ಮೌಲ್ಯದ ೧೦ ಕೆಜಿ ೪ ಗ್ರಾಂ ಗಾಂಜಾ ಹಾಗೂ ಗಾಂಜಾ ಸಾಗಣೆ ಮಾಡುತ್ತಿದ್ದ ಸ್ಕೂಟಿಯನ್ನು ಚಿಕ್ಕಮಗಳೂರು ಸಿಇಎನ್ ಅಪರಾಧ ಠಾಣೆ ಪೊಲೀಸರು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
ಸ್ಕೂಟಿ ಯಲ್ಲಿ ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದೀಪ ನರ್ಸಿಂಗ್ ಹೋಮ್ ನಿಂದ ಬೈಪಾಸ್ ರಸ್ತೆಗೆ ಹೋಗುವ ರಸ್ತೆ ಬಳಿ ದಾಳಿ ನಡೆಸಿದ ಪೊಲೀಸರು ಗಾಂಜಾ ಸಾಗಣೆ ಮಾಡುತ್ತಿದ್ದ ಚಿಕ್ಕಮಗಳೂರು ತಮಿಳು ಕಾಲನಿಯ ವಸೀಂ ಪಾಷಾ ಹಾಗೂ ನಾಜಿಮಾ ಎಂಬುವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಇಮ್ರಾನ್ ಖಾನ್, ಜಿ.ಕೆ.ಶಶಿಧರ, ಡಿ.ಬಿ.ಮಂಜುನಾಥ್, ಅನ್ವರ್ ಪಾಷಾ, ಹರೀಶ, ಮಹೇಂದ್ರ, ರಮೇಶ, ಹರಿಪ್ರಸಾದ್, ಮಾನಸಾ ಪಾಲ್ಗೊಂಡಿದ್ದರು.