

ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿದ್ದು, ಬೆಂಬಲವೂ ಸಿಕ್ಕಿದೆ. ಇದರಿಂದಾಗಿ ಹತಾಶರಾದ ಢೋಂಗಿಗಳು ರೈತರ ಮುಖವಾಡ ಧರಿಸಿ ಬಂದ್ ಕರೆ ನೀಡುವ ಮೂಲಕ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಮುಖಂಡರಾದ ಚಂದ್ರಶೇಖರ ಪರಸರಡ್ಡಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಇತರರ ಜತೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ರೈತರ ಹಿತ ಕಾಯಲೆಂದೇ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಅದನ್ನು ಸಹಿಸದೆ ಪ್ರತಿಪಕ್ಷದವರು ಇಲ್ಲದ ಪಿತೂರಿ ನಡೆಸುತ್ತಿದ್ದಾರೆ. ರೈತರ ಮುಖವಾಡ ಧರಿಸಿ ಹೋರಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಸಹ ಪಂಜಾಬ್ನ ಕಮೀಷನ್ ಏಜೆಂಟರೇ ಎಂದು ವಾಗ್ದಾಳಿ ನಡೆಸಿದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ರೈತರ ಬೆಳೆಗಳ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ, ಅಗತ್ಯ ವಸ್ತುಗಳ ಸರಕು ತಿದ್ದುಪಡಿ ಮಸೂದೆ, ಎಪಿಎಂಸಿ ಇತರ ಕಾಯ್ದೆಗಳು ರೈತರಿಗೆ ಅನುವು ಆಗಿವೆ. ಆದರೆ ವಾಮಪಕ್ಷಗಳು, ಕಾಂಗ್ರೆಸ್ನವರು ಕುತಂತ್ರ ಮಾಡುವ ಮೂಲಕ ರೈತರನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಇಡೀ ದೇಶದಲ್ಲಿ ಸೋತು ಸುಣ್ಣವಾಗಿ ಈಗ ಇಲ್ಲದ್ದನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
ಬಂದ್ಗೆ ರೈತರು ಬೆಂಬಲಿಸಿಲ್ಲ. ಸಂಪೂರ್ಣ ವಿಫಲಗೊಂಡಿದೆ. ರೈತರ ಆದಾಯ ಹೆಚ್ಚಿಸಲು ಪ್ರಧಾನಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಬೀಜ್ ಸೇ ಬಾಜಾರ್ ತಕ್ ಎಂಬ ಘೋಷಣೆಯೊಂದಿಗೆ ಎಲ್ಲ ಅನುಕೂಲ ರೈತರಿಗೆ ಆಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ ಮೂಲಕ ಸಾಲ ನೀಡಲಾಗಿದೆ. ರಸಗೊಬ್ಬರ ಕೊರತೆ ನಿವಾರಿಸಲಾಗಿದೆ. ಫಸಲ್ ಬಿಮಾ, ರೈತರ ಪಂಪ್ಸೆಟ್ಗಳಿಗೆ ಸೋಲಾರ್ ಅಳವಡಿಸಿರುವುದು ರೈತರಿಗೆ ಗೊತ್ತಿದೆ ಎಂದು ಹೇಳಿದರು.
ರೈತ ಮೋಚರ್ಾ ಗ್ರಾಮಾಂತರ ಜಿಲ್ಲಾಧ್ಯಕ್ಷ ರಮೇಶ ಪಸ್ತಾಪುರ ಧುತ್ತರಗಿ, ನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್, ಸಾಹೇಬಗೌಡ ಪಾಟೀಲ್, ಮಾಧ್ಯಮ ಪ್ರತಿನಿಧಿ ಅರುಣ ಕುಲಕಣರ್ಿ, ಬಾಬುರಾವ ಹಾಗರಗುಂಡಗಿ ಇತರರಿದ್ದರು.