ಹಣ್ಣು ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ

17blrp6
Published on

ಬೇಲೂರು: ತಾಲೂಕಿನ ಕೋಗಿಲಮನೆ ಗ್ರಾಮದ ಸಮೀಪ ಸೋಮವಾರ ಮೂಸೆಂಬಿ ಹಣ್ಣು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರ ತಪ್ಪಿ ಮಗುಚಿ ಬಿದ್ದಿದ್ದರಿಂದ, ರಸ್ತೆ ಪಾಲಾದ ಹಣ್ಣುಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರು ನಾಮುಂದು ತಾಮುಂದು ಎಂದು ಮುಗಿಬಿದ್ದರು.


ಹೈದರಬಾದ್‌ನಿಂದ ಬೇಲೂರಿಗೆ ಮೂಸಂಬಿ ಹಣ್ಣನ್ನು ತುಂಬಿಕೊಂಡು ಬರುತಿದ್ದ ಲಾರಿ ತಾಲೂಕಿನ ಕೋಗಿಲಮನೆ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭ ಲಾರಿಯಲ್ಲಿದ್ದ ಚಾಲಕ ಹಾಗೂ ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ ಲಾರಿ ಉರುಳಿ ಬಿದ್ದಾಗ ಅದರಲ್ಲಿದ್ದ ಮೂಸಂಬಿ ಹಣ್ಣುಗಳೆಲ್ಲ ರಸ್ತೆ ಪಕ್ಕದಲ್ಲಿ ಚೆಲ್ಲಿದ್ದರಿಂದ ದಾರಿಹೋಕರು ಮತ್ತು ಸಾರ್ವಜನಿಕರು ಹಣ್ಣುಗಳನ್ನು ತುಂಬಿಕೊಳ್ಳಲು ಮುಗಿಬಿದ್ದರು. ಸಮೀಪದ ಮನೆಗಳವರು ಚೀಲಗಳನ್ನು ತಂದು ಲಾರಿಯೊಳಗಿದ್ದ ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತಿದ್ದದ್ದು ಸಾಮಾನ್ಯವಾಗಿತ್ತು.

ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಘಟನೆಯಲ್ಲಿ ಚಾಲಕ ಹಾಗೂ ಸಹಾಯಕ ಸಣ್ಣಪುಟ್ಟ ಗಾಯಗಳಾಗಿದ್ದು, ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net