ಹಣ್ಣಿನ ಪ್ರಭೇದಗಳ ರಕ್ಷಣೆಗೆ ಒತ್ತು

16
Published on

ರೈತರಿಗೆ ಒಂದು ದಿನದ ಕಾರ್ಯಾಗಾರ ಆಯೋಜನೆ, ಬೆಳೆಗಳ ಕುರಿತು ಮಾಹಿತಿ

ತುಮಕೂರು: ಸಾಂಪ್ರದಾಯಿಕ ಹಣ್ಣಿನ ಬೆಳೆಗಳ ವೈವಿಧ್ಯತೆಯ ರಕ್ಷಣೆ ಮತ್ತು ಸುಸ್ಥಿರ ಬಳಕೆ ಉತ್ತೇಜಿಸುವ ಸಲುವಾಗಿ "ಹಣ್ಣಿನ ಬೆಳೆಗಳಲ್ಲಿ ರೈತರು ಪ್ರಭೇದಗಳ ರಕ್ಷಣೆಯ ಮೂಲಕ ಜೀವನೋಪಾಯ ಭದ್ರತೆಗಾಗಿ ಜೈವಿಕ ವೈವಿಧ್ಯತೆಯನ್ನು ಜೋಡಿಸುವುದು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ಹಿರೇಹಳ್ಳಿ ಐಸಿಎಆರ್​-ಐಐಎಚ್​ಆರ್​, ಕೇಂದ್ರ ತೋಟಗಾರಿಕಾ ಪ್ರಯೋಗ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಗಾರದಲ್ಲಿ ಪಿಪಿವಿ ಮತ್ತು ಎಫ್​ಆರ್​ಎ ಅಧ್ಯಕ್ಷೆ ಡಾ.ಟಿ.ಮೊಹಾಪಾತ್ರ, ಪಿಪಿವಿ ಮತ್ತು ಎಫ್​ಆರ್​ಎ ರಿಜಿಸ್ಟ್ರಾರ್​ ಜನರಲ್​ ಡಾ.ಡಿ.ಕೆ.ಅಗರ್ವಾಲ್​ ಮತ್ತಿತರರು ಭಾಗವಹಿಸಿದ್ದರು.

ಹಣ್ಣಿನ ಬೆಳೆಗಳಲ್ಲಿ ರೈತರ ಪ್ರಭೇದಗಳು ಸಾಂಪ್ರದಾಯಿಕ ಅಥವಾ ಸ್ಥಳಿಯ ತಳಿಗಳಾಗಿದ್ದು, ಇವುಗಳನ್ನು ರೈತರು ತಲೆಮಾರುಗಳಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಿ ಅಭಿವೃದ್ಧಿಪಡಿಸಿ ಮತ್ತು ನಿರ್ವಹಿಸುತ್ತಿದ್ದಾರೆ. ಈ ಪ್ರಭೇದಗಳು ಸ್ಥಳಿಯ ಕೃಷಿ- ಹವಾಮಾನ ಪರಿಸ್ಥಿತಿಗಳಿಗೆ ಅನನ್ಯವಾಗಿ ಹೊಂದಿಕೊಳ್ಳುತ್ತವೆ ಮತ್ತು ಅನುವಂಶಿಕ ವೈವಿಧ್ಯತೆಯ ಸಂರಕ್ಷಣೆಗೆ ಅವಿಭಾಜ್ಯವಾಗಿವೆ ಎಂದು ಡಾ.ಟಿ.ಮೊಹಾಪಾತ್ರ ಅಭಿಪ್ರಾಯಪಟ್ಟರು.

ಸಸ್ಯ ವೈವಿಧ್ಯ ಸಂರಕ್ಷಣೆ ಮತ್ತು ಸಸ್ಯ ತಳಿಗಾರರ ಹಕ್ಕುಗಳು ಚೌಕಟ್ಟಿನ ಅಡಿಯಲ್ಲಿ ಈ ಪ್ರಭೇದಗಳನ್ನು ರಕ್ಷಿಸುವ ಮೂಲಕ, ನಮ್ಮ ರೈತರು ಜೀವವೈವಿಧ್ಯದ ಪಾಲಕರನ್ನು ಗುರುತಿಸುತ್ತಾರೆ ಮತ್ತು ಪುರಸ್ಕರಿಸುತ್ತಾರೆ. ಸ್ಥಿತಿಸ್ಥಾಪಕ ಮತ್ತು ಹೆಚ್ಚಿನ ಮೌಲ್ಯದ ತಳಿಗಳನ್ನು ಪ್ರವೇಶಿಸುವ ಮೂಲಕ ಕೃಷಿ ಸಮುದಾಯಕ್ಕೂ ಪ್ರಯೋಜನ ನೀಡುತ್ತಾರೆ ಎಂದರು.

ಶೈಕ್ಷಣಿಕ, ಉದ್ಯಮ ಮತ್ತು ಪ್ರಗತಿಪರ ಕೃಷಿ ಸಮುದಾಯಗಳ ತಜ್ಞರನ್ನು ಒಟ್ಟುಗೂಡಿಸಿ ರೈತರ ಪ್ರಭೇದಗಳ ಪ್ರಾಮುಖ್ಯತೆ, ಅವುಗಳ ವಾಣಿಜ್ಯ ಕೃಷಿ, ಕಾನೂನು ಸಂರಕ್ಷಣಾ ಕಾರ್ಯವಿಧಾನಗಳು ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸುವ ಗುರಿಯನ್ನು ಕಾರ್ಯಾಗಾರ ಆಯೋಜಿಸಲಾಗಿದೆ. ಈ ಚರ್ಚೆಗಳು ರೈತರಲ್ಲಿ ವರ್ಧಿತ ಜಾಗೃತಿ ಮತ್ತು ಸಾಮರ್ಥ್ಯ ವೃದ್ಧಿಗೆ, ವಿಶೇಷವಾಗಿ ಸಸ್ಯ ವೈವಿಧ್ಯಗಳು ಮತ್ತು ರೈತರ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಅವರ ಪ್ರಭೇದಗಳ ರಕ್ಷಣೆಗೆ ಸಂಬಂಧಿಸಿದಂತೆ ಮುಂದುವರಿಯುವ ಮಾರ್ಗಕ್ಕೆ ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದರು.

ರೈತರ ಪ್ರಭೇದಗಳ ಪ್ರಾಮುಖ್ಯತೆ ಮತ್ತು ಅವುಗಳ ರಕ್ಷಣೆ ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆದ ತಾಂತ್ರಿಕ ಅಧಿವೇಶನದಲ್ಲಿ ಐಸಿಎಆರ್​ ನಿರ್ದೇಶಕ ಡಾ.ಟಿ.ಕೆ.ಬೆಹೆರಾ ಮತ್ತು ರಿಜಿಸ್ಟ್ರಾರ್​ ಜನರಲ್​ ಡಾ.ಡಿ.ಕೆ.ಅಗರ್ವಾಲ್​ ಮಾತನಾಡಿದರು. ಕಾರ್ಯಾಗಾರದಲ್ಲಿ ವಿವಿಧೆಡೆಯ 350ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಪ್ರಧಾನ ವಿಜ್ಞಾನಿ ಡಾ.ಜಿ.ಕರುಣಾಕರನ್​ ಮತ್ತಿತರರು ಇದ್ದರು.

ಹಲಸು, ಹುಣಸೆಯಿಂದ ವಾರ್ಷಿಕ ಆದಾಯ ವೃದ್ಧಿ: ಐಸಿಎಆರ್​-ಐ, ಐಎಚ್​ಆರ್​ ಮಧ್ಯಪ್ರವೇಶಿಸುವ ಮೊದಲು ನಗಣ್ಯವಾಗಿದ್ದ ಹಲಸಿನ ಹಣ್ಣು ಮತ್ತು ಹುಣಸೆ ಕೃಷಿಯಿಂದ ರೈತರ ವಾರ್ಷಿಕ ಆದಾಯ ಸುಧಾರಿಸಿದೆ. ಪ್ರಯೋಜನ ಹಂಚಿಕೆ ಮಾದರಿಯ ಮೂಲಕ, ಐಸಿಎಆರ್​-ಐಐಎಚ್​ಆರ್​ ಎಸ್​.ಎಸ್​.ಪರಮೇಶ (ಸಿದ್ದು) ಅವರಿಗೆ ಐದು ವರ್ಷಗಳಲ್ಲಿ 1 ಕೋಟಿ ರೂ. ಪಾವತಿಸಿದೆ. ಶಂಕರಯ್ಯ (ಶಂಕರ ಹಲಸು) 2 ವರ್ಷಗಳಲ್ಲಿ 21 ಲಕ್ಷ ರೂ. ಪಾವತಿಸಿದರು, ಲಕ್ಷ$್ಮಣಪ್ಪ (ಲಕ್ಷ$್ಮಣ ಹುಣಸೆ) 1 ವರ್ಷದಲ್ಲಿ 6.5 ಲಕ್ಷ ರೂ. ಪಾವತಿಸಲಾಗಿದೆ. ತುಮಕೂರು ಜಿಲ್ಲೆ ಕೂಡ ಗಮನಾರ್ಹವಾಗಿ ಜೀವವೈವಿಧ್ಯ ತಾಣವಾಗಿ ಹೊರಹೊಮ್ಮಿದ್ದು, ಕಕ್ಖ&ಊ್ಕಅ ಅಡಿಯಲ್ಲಿ ಹಣ್ಣಿನ ಬೆಳೆಗಳಲ್ಲಿ ರೈತರ ನಾಲ್ಕು ಅಧಿಕೃತವಾಗಿ ಗುರುತಿಸಲ್ಪಟ್ಟ ಪ್ರಭೇದಗಳನ್ನು ಕೊಡುಗೆಯಾಗಿ ನೀಡಿದೆ. ಹಲಸಿನ ಹಣ್ಣಿನಲ್ಲಿ ಎರಡು (ಸಿದ್ದು ಮತ್ತು ಶಂಕರ), ಹುಣಸೆಯಲ್ಲಿ ಒಂದು (ಲಕ್ಷ$್ಮಣ) ಮತ್ತು ಜಾಮುನ್​ನಲ್ಲಿ ಒಂದು (ನಿರಂತರ ಕುಮಾರ್​ ಜಾಮುನ್​). ಸ್ಥಳಿಯ ಹಣ್ಣಿನ ವೈವಿಧ್ಯತೆ ಸಂರಕ್ಷಿಸುವಲ್ಲಿ ಮತ್ತು ವಾಣಿಜ್ಯೀಕರಣಗೊಳಿಸುವಲ್ಲಿ ಜಿಲ್ಲೆಯ ಅಸಾಧಾರಣ ಪಾತ್ರವಹಿಸಿದೆ.

2300 ಎಕರೆ ವಿಸ್ತರಣೆ: ರೈತರ ನೇತೃತ್ವದ ಸಂರಕ್ಷಣೆ ಮತ್ತು ಪ್ರಯೋಜನ ಹಂಚಿಕೆ ಗಮನಾರ್ಹ ಯಶೋಗಾಥೆಯಲ್ಲಿ, ಐಸಿಎಆರ್​-ಐ, ಐಎಚ್​ಆರ್​ ಗುರುತಿಸಿ ಬೆಂಬಲಿಸಿದ ಹಲಸಿನ ಹಣ್ಣಿನ ಪ್ರಭೇದಗಳಾದ 'ಸಿದ್ದು' ಮತ್ತು "ಶಂಕರ', ಹುಣಸೆ ತಳಿ 'ಲಕ್ಷ$್ಮಣ' ಮತ್ತು ಜಾಮುನ್​ ತಳಿ 'ನಿರಂತರ ಕುಮಾರ್​ ಜಾಮುನ್​' ಜೀವವೈವಿಧ್ಯ ರಕ್ಷಣೆ ಹೇಗೆ ಸುಸ್ಥಿರ ಜೀವನೋಪಾಯವಾಗಿ ಪರಿವರ್ತನೆಗೊಳ್ಳುತ್ತಿವೆ. ವಾಣಿಜ್ಯೀಕರಣ ಮಾದರಿ ರೈತರನ್ನು "ಆನುವಂಶಿಕ ವೈವಿಧ್ಯತೆಯ ಪಾಲಕರು" ಎಂದು ಗುರುತಿಸಿದ್ದಲ್ಲದೆ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕದ ಮೂಲಕ ಅವರನ್ನು ಸಬಲೀಕರಣಗೊಳಿಸಿತು, 31000ಕ್ಕೂ ಹೆಚ್ಚು ರೈತರನ್ನು ತಲುಪಿತು ಮತ್ತು 2300 ಎಕರೆಗಳನ್ನು ಗಣ್ಯ ಪ್ರಭೇದಗಳೊಂದಿಗೆ ವಿಸ್ತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net