ಹಣಬರ ಸಮುದಾಯ ಅಭಿವೃದ್ಧಿಗೆ ಬದ್ಧ

3
Published on

ಗೋಕಾಕ: ಹಿಂದುಳಿದ ಹಣಬರ ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ಶೈಣಿಕವಾಗಿ ಸಬಲೀಕರಣ ಸಾಧಿಸಲು ವ್ಯವಸ್ಥಿತ ಸಂಟನೆ ಮುಖ್ಯ. ಈ ದಿಸೆಯಲ್ಲಿ ಸಮುದಾಯಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲು ಸಿದ್ಧ. ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಮಹಾಲಕ್ಷಿ$್ಮ ಸಭಾಭವನದಲ್ಲಿ ಹಣಬರ (ಯಾದವ) ಸಮಾಜ ೇಮಾಭಿವೃದ್ಧಿ ಸಂದ ಗೋಕಾಕ ಮತ್ತು ಮೂಡಲಗಿ ತಾಲೂಕು ಜಂಟಿಯಾಗಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಏಳಿಗೆಗೆ ಶಿಣವೊಂದೇ ಪ್ರಮುಖ ಅಸ್ತ್ರವಾಗಿದೆ. ಗೋಕಾಕ ಮತ್ತು ಅರಬಾವಿ ೇತ್ರಗಳ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಎಲ್ಲ ಸಮುದಾಯದವರಿಗೂ ರಾಜಕೀಯ ಸ್ಥಾನಮಾನ ನೀಡಲಾಗಿದೆ. ಎಲ್ಲರ ಪ್ರಗತಿಗೆ ನಮ್ಮ ಕುಟುಂಬ ಸದಾ ಸಿದ್ಧವಿದೆ ಎಂದು ಹೇಳಿದರು.

ಕುಂಭಮೇಳಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು. ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಹಣಬರ ಸಮುದಾಯದ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಚಿತ್ರದುರ್ಗದ ಹಣಬರ ಮಠದ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಯಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ಪ್ರಭಾ ಶುಗರ್​ ನಿರ್ದೇಶಕ ಶಿವಲಿಂಗ ಪೂಜೇರಿ, ಸಿದಗೌಡ ಪಾಟೀಲ, ಬಿ.ಎಲ್​.ಪಾಟೀಲ, ಡಾ.ಅರವಿಂದ ತೇಣಗಿ, ಶೀತಲ ಮುಂಡೆ, ಮಂಜುನಾಥ ಪಾಟೀಲ, ಕಸಾಪ ಅಧ್ಯ ಡಾ.ಸಂಜಯ ಸಿಂಧಿಹಟ್ಟಿ, ಶ್ರೀಪತಿ ಗಣೇಶವಾಡಿ, ಸುರೇಶ ಜಾಧವ, ಸಿದ್ರಾಮ ದ್ಯಾಗಾನಟ್ಟಿ, ಸಿದ್ರಾಮ ಮೂಲಿಮನಿ, ರಮೇಶ ಪೂಜೇರಿ, ಮಾಯಪ್ಪ ಏಕಣಿ, ರಮೇಶ ಜುಪ್ರಿ, ಗೋಪಾಲ ಮಲ್ಲನವರ, ಈರಪ್ಪ ಸಂಗಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net