

ಚಿಕ್ಕಮಗಳೂರು: ಕಡೂರು ತಾಲೂಕು ಪುರ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡುಬAದಿರುವ ಬಗ್ಗೆ ಕಡೂರು ತಾಪಂ ಇಒ ವರದಿ ನೀಡಿದ್ದರೂ ಜಿಪಂ ಸಿಇಒ ಪಿಡಿಓ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅವರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಡಾ. ಭೀಮರಾವ್ ಕ್ರಾಂತಿಕಾರಿ ಸೇನೆ ಕಾರ್ಯಾಧ್ಯಕ್ಷ ಮಂಜುನಾಥ್ ರಂಗಪ್ಪ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಡೂರು ತಾಲೂಕು ಪುರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಆಗಿದ್ದವರು ಸುಮಾರು ೧೦ ಲಕ್ಷ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಪಂ ಸಿಇಓ ಅವರಿಗೆ ದೂರು ನೀಡಿದಾಗ ಅವರು ತನಿಖೆ ಮಾಡಿ ವರದಿ ನೀಡಲು ಕಡೂರು ತಾಲೂಕು ಪಂಚಾಯಿತಿ ಇಓ ಅವರಿಗೆ ಸೂಚಿಸಿದ್ದರು ಎಂದರು.
೨೦೨೫ರ ಫೆ.೧೦ ರಂದು ವರದಿ ನೀಡಿದ್ದಾರೆ. ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದ್ದು, ಮುಂದಿನ ಕ್ರಮಕ್ಕಾಗಿ ಜಿಪಂ ಸಿಇಒಗೆ ವರದಿ ಸಲ್ಲಿಸಿರುವುದಾಗಿ ತಾಪಂ ಇಒ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ ಅವರು ಪಂಚಾಯಿತಿಯಲ್ಲಿ ಕೂಡ ಕರ್ತವ್ಯ ಲೋಪವಾಗಿರುವ ಬಗ್ಗೆ ಉಲ್ಲೇಖಿಸಿದ್ದು, ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ್ದಾರೆ. ಇದಾದ ನಂತರ ಸಿಇಓ ಅವರು ಪಿಡಿಒ ಅವರಿಗೆ ಕಾರಣ ಕೇಳಿ ನೊಟೀಸ್ ನೀಡಿದ್ದಾರೆಯೇ ವಿನಾ ೨ ತಿಂಗಳಾಗುತ್ತಾ ಬಂದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಕರ್ತವ್ಯಲೋಪದ ಆರೋಪ ಕೇಳಿಬಂದಾಗ ೪ ಮಂದಿ ಪಿಡಿಒ ಗಳನ್ನು ೩-೪ ದಿನದಲ್ಲಿ ಅಮಾನತು ಮಾಡಿರುವ ಸಿಇಓ ಅವರು ಪುರ ಗ್ರಾಪಂ ಪಿಡಿಒ ಅವರಿಗೆ ನೊಟೀಸ್ ನೀಡಿ ೯೦ ದಿನವಾದರೂ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದೇವಿಕುಮಾರ್, ಹೇಮಂತ್‌ಕುಮಾರ್ ಇದ್ದರು.