ಹಣದ ಆಮಿಷ್ ಆರೋಪ, ತಮ್ಮಣ್ಣವರ ವಿರುದ್ಧ ದೂರು

g1g2ggg3
Published on

ಹಾರೂಗೇರಿ: ಕುಡಚಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಪರ ಪ್ರಚಾರಾರ್ಥವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗಮಿಸಿ ರೋಡ ಶೋ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಜನರನ್ನು ಹೆಚ್ಚಿಗೆ ಸೇರಿಸುವ ಉದ್ದೇಶದಿಂದ ಹಾರೂಗೇರಿಯ ಚನ್ನವೃಷಭೇಂದ್ರ ಲೀಲಾ ಮಠದಲ್ಲಿ ಸುಮಾರು 500 ರಿಂದ 600ಮಹಿಳೆಯರನ್ನು ಸೇರಿಸಿ ಅವರಿಗೆ ಅನಾಮಧೇಯ 4-5 ಜನ ಸೇರಿ ಹಣ ಹಂಚಿಕೆ ಮಾಡಿ ಆಮಿಷ ತೋರಿಸಿ ಲಂಚ ನೀಡಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಪ್ರಕಾರ ಆರ್‌ಪಿ ಕಾಯ್ದೆ 1951 ರ ಕಾಯ್ದೆಯಡಿಯಲ್ಲಿ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಚುನಾವಣೆ ಆಯೋಗ ತನಿಖೆ ನಡೆಸಿ, ಮುಂದಿನ ಕ್ರಮ ಜರುಗಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net