ಹಣಕ್ಕಿಂತ ಧಾರ್ಮಿಕ ಸಂಸ್ಕಾರ ಅವಶ್ಯ

web4
ಹೊಸೂರ ಗ್ರಾಮದಲ್ಲಿ ಡಾ. ಬಸವಲಿಂಗ ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ನಾಗಪ್ಪ ಮಾಕಿ, ಚನ್ನಪ್ಪ ಬೂದಿಹಾಳ, ದೇಮಪ್ಪ ಯರಡಾಲ, ಎ್.ಎಸ್. ಸಿದ್ದನಗೌಡರ ಇತರರು ಇದ್ದರು.
Published on

ಬೈಲಹೊಂಗಲ: ಹಣ, ಐಶ್ವರ್ಯಕ್ಕಿಂತ ಮನುಷ್ಯನಿಗೆ ಧಾರ್ಮಿಕ ಸಂಸ್ಕಾರ ಅತ್ಯಂತ ಅವಶ್ಯ ಎಂದು ಶಿರೂರ ನಿಸರ್ಗ ಚಿಕಿತ್ಸಾ ಪೀಠಾಧಿಪತಿ ಡಾ.ಬಸವಲಿಂಗ ಶ್ರೀಗಳು ಹೇಳಿದರು.

ಸಮೀಪದ ಹೊಸೂರು ಗ್ರಾಮದಲ್ಲಿ ಸಿದ್ದನಗೌಡರ ಕುಟುಂಬದವರು ಈಚೆಗೆ ಆಯೋಜಿಸಿದ್ದ ಕುಟುಂಬದ ಲಿಂಗೈಕ್ಯರ ಸ್ಮರಣೆ, ಶ್ರಾವಣ ಮಾಸದ ಲಿಂಗಾಯತ ಧರ್ಮ ಜಾಗತಿ ಸಭೆಯಲ್ಲಿ ಅವರು ಮಾತನಾಡಿದರು.

ಬಸವಣ್ಣನವರು ಧರ್ಮ ಸ್ಥಾಪಿಸಿ ಪಂಚಾಚಾರ್ಯ, ಅಷ್ಟಾವರಣ, ಇಷ್ಟಲಿಂಗ ಹಾಗೂ ವಚನ ಸಾಹಿತ್ಯ ನೀಡಿ ಧರ್ಮದ ಉಳಿವಿಗಾಗಿ ಸರ್ವತ್ಯಾಗಿಯಾಗಿದ್ದಾರೆ. ಶರಣರ ಆಸೆಯಂತೆ ನಾವೆಲ್ಲರೂ ಲಿಂಗಧಾರಿಗಳಾಗಿ, ಮೂಢಾಚರಣೆ ಬಿಟ್ಟು ನಿಜ ಆಚರಣೆ ಕೈಗೊಳ್ಳಬೇಕಾಗಿದೆ ಎಂದರು.

ಗ್ರಾಮದ ಹಡಪದ ಸಮುದಾಯ ಓಣಿ ಮೂಲಕ ಪಾದಯಾತ್ರೆ ಕೈಗೊಂಡಿದ್ದ ಡಾ. ಬಸವಲಿಂಗ ಸ್ವಾಮೀಜಿ ಅವರನ್ನು ಹಡಪದ, ಮುಸ್ಲಿಂ ಸಮುದಾಯದವರು ಸತ್ಕರಿಸಿದರು. ಬಸವ ಬಳಗದ ದೇಮಪ್ಪ ಸಂಗೊಳ್ಳಿ, ಮಡಿವಾಳಪ್ಪ ಕೊರಿಕೊಪ್ಪ, ಗೋಪಾಲ ಚಿಕ್ಕೊಪ್ಪ, ಸೋಮಲಿಂಗಪ್ಪ ಕೋಟಗಿ ಅವರನ್ನು ಸತ್ಕರಿಸಲಾಯಿತು.

ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ ಷಟ್ಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಂತೋಷಗೌಡ ಹಾಗೂ ಡಾ.ಪ್ರಿಯಾಂಕ ಸಿದ್ದನಗೌಡರ ದಂಪತಿ ಗುರುಪೂಜೆ ನೆರವೇರಿಸಿದರು. ಶಿಕ್ಷಕ ಮಡಿವಾಳಪ್ಪ ಸಂಗೊಳ್ಳಿ, ನಾಗಪ್ಪ ಮಾಕಿ, ಚನ್ನಪ್ಪ ಬೂದಿಹಾಳ, ದೇಮಪ್ಪ ಯರಡಾಲ ಇದ್ದರು. ರಾಜು ಮುಗಬಸವ ಪ್ರಾಸ್ತಾವಿಕ ಮಾತನಾಡಿದರು. ಎ್.ಎಸ್.ಸಿದ್ದನಗೌಡರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net