ಹಣಕ್ಕಿಂತ ಅಧ್ಯಾತ್ಮ ಸಂಪತ್ತು ಶ್ರೇಷ್ಠ

Nudi Naman
Published on

ಬೀದರ್: ಮನುಷ್ಯ ಇಂದು ಹಣದ ಮೋಹದಲ್ಲಿ ಸಿಲುಕಿ ಅಧರ್ಮದಿಂದ ಬಾಳು ನಡೆಸುತ್ತಿದ್ದಾನೆ. ಇದನ್ನು ಬಿಟ್ಟು ಸತ್ಯ, ಶುದ್ಧ ಕಾಯಕ ಮಾಡಿ ಅಧ್ಯಾತ್ಮ ಸಂಪತ್ತು ಗಳಿಸಬೇಕು ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ನೌಬಾದ್ ಯಲ್ಲಾಲಿಂಗ ಕಾಲನಿಯಲ್ಲಿ ಏರ್ಪಡಿಸಿದ್ದ ಶರಣೆ ಸಂಗಮ್ಮ ತಾಯಿ ಕಪಲಾಪುರೆ ಅವರ ನುಡಿನಮನದಲ್ಲಿ ಮಾತನಾಡಿ, ಆಸ್ತಿ ಸಂಪಾದನೆ ಬಿಟ್ಟು ಮಕ್ಕಳಿಗೆ ಉತ್ತಮ ಸಂಸ್ಕಾರ, ಅಧ್ಯಾತ್ಮ ಜ್ಞಾನ ನೀಡುವ ಅಗತ್ಯವಿದೆ. ಶರಣೆ ಸಂಗಮ್ಮ ನಾಲ್ಕು ದಶಕ ಪತಿ ಸಿದ್ರಾಮಪ್ಪ ಜತೆ ಬಸವ ಸೇವೆಯಲ್ಲಿ ತೊಡಗಿದ್ದರು ಎಂದರು.
ಭಾಲ್ಕಿ ಹಿರೇಮಠದ ಶ್ರೀ ಮಹಾಲಿಂಗ ದೇವರು ಮಾತನಾಡಿ, ಓಣಿಗೊಂದು ಬಸವ ಮಂಟಪ ಇರಬೇಕು. ಇದರಿಂದ ಸುಸಂಸ್ಕೃತ ಸಮಾಜ ನಿಮರ್ಾಣ ಸಾಧ್ಯ. ಇಲ್ಲಿನ ಬಸವ ಮಂಟಪ ಮಾದರಿ ನಿಮರ್ಿಸಿರುವುದರ ಹಿಂದೆ ಸಂಗಮ್ಮ ತಾಯಿ ಕೊಡುಗೆ ಅಪಾರವಿದೆ ಎಂದು ಸ್ಮರಿಸಿದರು.
ಪ್ರಮುಖರಾದ ಶರಣಪ್ಪ ಮಿಠಾರೆ, ರಮೇಶ ಮಠಪತಿ, ಕಲ್ಯಾಣರಾವ ಚಾಳಕಾಪುರೆ, ಓಂಪ್ರಕಾಶ ದಡ್ಡೆ, ಸಂಗಪ್ಪ ಹಿಪ್ಪಳಗಾಂವ, ಸಿದ್ರಾಮಪ್ಪ ಕಪಲಾಪುರೆ, ಶಿವಶರಣಪ್ಪ ಪಾಟೀಲ್ ಇತರರಿದ್ದರು. ಕಂಟೆಪ್ಪ ಗಂದಿಗುಡೆ ಸಂಗೀತ ಸೇವೆ ನೀಡಿದರು. ಅಕ್ಕ ನಾಗಮ್ಮ ಬಳಗದಿಂದ ಭಜನೆ ಜರುಗಿತು. ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು. ಚನ್ನಬಸವ ಕಪಲಾಪುರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net