

ಹುಮನಾಬಾದ್: ಸಿಂಧನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಕುಣಿಯಲ್ಲಿ ಭೂಮಾಲೀಕರಿಂದ ಅನುಮತಿ ಪಡೆಯದೆ ಮೂರು ಕೃಷಿ ಹೊಂಡ ಕಾಮಗಾರಿ ಮಾಡದೆ ಬಿಲ್ ಎತ್ತಲಾಗಿದ್ದು, ತನಿಖೆ ನಡೆಸಿ ಸಂಬAಧಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕ ಒತ್ತಾಯಿಸಿದೆ.
ಪ್ಯಾಂಥರ್ ನಿಯೋಗ ಗುರುವಾರ ತಾಪಂ ಕಚೇರಿಯಲ್ಲಿ ಇಒ ದೀಪಿಕಾ ನಾಯ್ಕರ್ ಅವರಿಗೆ ಲಿಖಿತ ದೂರು ಸಲ್ಲಿಸಿ ಹಣಕುಣಿಯಲ್ಲಿ ಸರ್ವೇ ನಂ.33ರಲ್ಲಿ ಭೂ ಮಾಲೀಕರಿಂದ ಅನುಮತಿ ಪಡೆಯದೆ, ಕೃಷಿ ಹೊಂಡ ನಿರ್ಮಿಸದೆ ಬಿಲï ಪಡೆದಿರುತ್ತಾರೆ. ಭೂಮಾಲೀಕರಿಗೆ ವಿಷಯ ತಿಳಿದಾಕ್ಷಣ ಸಂಬAಧಿತ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬಳಿಕ ಸಂಘಟನೆ ಮೂಲಕ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಕ್ಯಾರೆ ಎನ್ನುತ್ತಿö್ತಲ್ಲ. ಸಂಬAಧಪಟ್ಟ ಪಿಡಿಒ, ಜೆಇ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ತಾಪಂ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಪ್ಯಾಂಥರ್ ತಾಲೂಕು ಅಧ್ಯP್ಷÀ ಗಣಪತಿ ಅಷ್ಟೂರೆ, ಉಪಾಧ್ಯP್ಷÀ ಸುಶೀಲಕುಮಾರ ಬೋಲಾ, ಪ್ರಮುಖರಾದ ಸಿದ್ಧಾರ್ಥ ಜಾನವೀರ, ಬಸವರಾಜ ಸಿಂಧೆ, ವಿಶಾಲ ಸಿಂಧನಕೇರಾ, ಆನಂದ ಮಾಳಗೆ, ವಿಜಯಕುಮಾರ ಹಳ್ಳಖೇಡಕರ, ವಿಠಲ್ ಶಿವನಾಯಕ, ಗೌತಮ ಜಾನವೀರ, ಆಕಾಶ ಸಿಂಧೆ, ದೇವಿಂದ್ರ ಗz್ದÁರ, ಅಜಯಕುಮಾರ ಮನ್ನಳ್ಳಿಕರ, ಮಾಣಿಕ ಮಚಕುರೆ, ಮಹಾವೀರ ನಿಯೋಗದಲ್ಲಿದ್ದರು.