

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಣಕಾಸಿನ ವಿಷಯವಾಗಿ ಉಂಟಾದ ಜಗಳದಲ್ಲಿ ವ್ಯಕ್ತಿಯೊಬ್ಬನ್ನು ಮಾರಕಾಸ್ತçಗಳಿಂದ ಇರಿದು ಕೊಲೆ ಮಾಡಿದ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಅಶೋಕ ಪ್ಯಾಟಿ (೪೪) ಕೊಲೆಯಾಗಿರುವ ವ್ಯಕ್ತಿ. ಮಹಿಳೆಯೊಬ್ಬರು ಕಷ್ಟದಲ್ಲಿದ್ದಾಗ ಮಧ್ಯವರ್ತಿಯಾಗಿ ಇನ್ನೊಬ್ಬರ ಬಳಿ ಹಣ ಕೊಡಿಸಿದ್ದ. ಹಣ ಪಡೆದುಕೊಂಡವರು ಕೊಡದಿದ್ದಾಗ, ಮಧ್ಯವರ್ತಿಯಾಗಿದ್ದ ಈತ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಕೊಲೆಯಾಗಿರುವ ಅಶೋಕಗೆ ಪರಿಚಯದ ಜಾನಪ್ಪ ಹಾಲಗಡ್ಡಿ ಎಂಬುವರ ಬಳಿ ಐದಾರು ವರ್ಷಗಳ ಹಿಂದೆ ೫ ಸಾ.ರೂ. ಪಡೆದುಕೊಂಡಿದ್ದರು. ಜಾನಪ್ಪ ತನ್ನ ಚಿಕ್ಕಮ್ಮಳ ಬಳಿ ಹಣ ತೆಗೆದುಕೊಂಡು ಅಶೋಕನಿಗೆ ಕೊಟ್ಟಿದ್ದರು. ಅಶೋಕ ಕಷ್ಟ ಹೇಳಿಕೊಂಡಿದ್ದ ಮಹಿಳೆಗೆ ಕೊಟ್ಟಿದ್ದರು.
ಹಣ ಪಡೆದುಕೊಂಡು ಐದಾರು ವರ್ಷವಾದರೂ ಕೊಟ್ಟಿರಲಿಲ್ಲ. ಅದಕ್ಕೆ ಬಡ್ಡಿ ಎಲ್ಲ ಸೇರಿ ೨೦ ಸಾ.ರೂ.ಕೊಡುವಂತೆ ಜಾನಪ್ಪನ ಚಿಕ್ಕಮ್ಮ ಹೇಳಿದ್ದರು. ಹಣವನ್ನು ಕೊಡುವಂತೆ ಅಶೋಕಗೆ ಜಾನಪ್ಪ ಕೇಳಿದ ಮಹಿಳೆಗೆ ಕೊಡಿಸಿz್ದೆÃನೆ. ಕೊಡಲು ಹೇಳುವೆ ಎಂದು ಹೇಳಿದ್ದರು. ಇದೇ ಕಾರಣಕ್ಕಾಗಿ ಆಗಾಗ ಜಗಳವಾಗುತ್ತಿತ್ತು. ಭಾನುವಾರ ರಾತ್ರಿ ಜಾನಪ್ಪ, ಗುಂಡಪ್ಪ, ಸೋಮು ಕೂಡಿಕೊಂಡು ಅಶೋಕನಿಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.