ಹಣಕಾಸಿನ ವಿಚಾರಕ್ಕೆ ಕಲಹ, ಎರಡು ಗುಂಪುಗಳ‌ ಮಧ್ಯೆ ಗಲಾಟೆ, ಬೀದಿ ಜಗಳ ಬಿಡಿಸಲು ಲಾಠಿ ಬೀಸಿದ ಎಸ್ ಪಿ

1662623011697
Published on

ವಿಜಯಪುರ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಬೀಡಿಸಲು ಎಸ್ ಪಿ ಎಚ್.ಡಿ.ಆನಂದಕುಮಾರ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಬಳಿಯ ದಾತ್ರಿ ಮಸೀದಿ ಹತ್ತಿರ

ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಎಸ್ ಪಿ ಎಚ್.ಡಿ. ಆನಂದಕುಮಾರ ಕಚೇರಿಗೆ ತೆರಳುತ್ತಿದ್ದಾಗ ರಸ್ತೆ ಮೇಲೆಯೇ ಗಲಾಟೆ ನಡೆದಿತ್ತು. ಚಿಕನ್ ಅಂಗಡಿಕಾರರ ಜೊತೆ ಉಂಟಾದ ಜಗಳ ಬೀದಿಗೆ ಬಂದಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯೂ ಆಗಿತ್ತು. ಕೂಡಲೇ ಕಾರ್ ನಿಂದ ಇಳಿದ ಎಸ್ ಪಿ ಎಚ್.ಡಿ. ಆನಂದಕುಮಾರ ಎರಡೂ ಗುಂಪುಗಳಲ್ಲಿದ್ದವರಿಗೆ ಥಳಿಸಿದ್ದಾರೆ. ಬಳಿಕ ಸಂಬಂಧಿಸಿದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದರು. ಮಾತ್ರವಲ್ಲ, ಗಲಾಟೆ ನಡೆಸಿದವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಡಿವೈಎಸ್ ಪಿ ಸಿದ್ದೇಶ್ವರ, ಸಿಪಿಐ ಸಿದ್ದೇಶ ಮತ್ತಿತರರು ಸ್ಥಳದಲ್ಲಿದ್ದು ಸಂಚಾರ ದಟ್ಟಣೆ ನಿಭಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net