ಹಣ ಮಾಡಲು ರಾಜಕೀಯಕ್ಕೆ ಬರಲ್ಲ

1blrp3
Published on

ಬೇಲೂರು: ಕೆಲವರು ಹಣ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬರುತ್ತಾರೆ. ಆದರೆ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಸಮಾಜಮುಖಿ ಕೆಲಸ ಮಾಡಲು ರಾಜಕಾರಣಕ್ಕೆ ಬರುತ್ತಾರೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಕೆ.ಸುರೇಶ್ ಹೇಳಿದರು.


ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕಿ ಕಾಂಗ್ರೆಸ್ ಪಕ್ಷದ ಗಿರಿಜಮ್ಮ ಅವರನ್ನು ಬಿಜೆಪಿಗೆ ಸ್ವಾಗತಿಸಿ ಮಾತನಾಡಿದ ಅವರು, ಹಣ ಮಾಡುವುದಕ್ಕೆಂದೆ ರಾಜಕೀಯಕ್ಕೆ ಬರುತ್ತಾರೆಂಬುದನ್ನು ಜನರು ಭಾವಿಸಿರುತ್ತಾರೆ. ಆದರೆ, ಭಾರತೀಯ ಜನತಾ ಪಾರ್ಟಿ ಇಂತಹ ತಪ್ಪು ಧೋರಣೆಗಳನ್ನು ಸಹಿಸುವುದಿಲ್ಲ. ಸಮಾಜಮುಖಿ ಕಾರ್ಯವನ್ನು ಮಾಡುವುದರಲ್ಲಿಯೇ ಹೆಚ್ಚಿನ ಆಸಕ್ತಿ ತೋರುತ್ತದೆ. ಅಲ್ಲದೆ, ಇತ್ತೀಚೆಗೆ ಜನರು ಭ್ರಷಷ್ಟಾಚಾರ ಸಹಿಸುವುದಿಲ್ಲ. ಹಾಗಾಗಿ ಇಂದು ಸಾವಿರಾರು ಜನರು ಬಿಜೆಪಿ ಪಕ್ಷವನ್ನು ಸೇರುತ್ತಿದ್ದಾರೆ. ಅದರಲ್ಲಿ ಗಿರಿಜಮ್ಮ ಅವರೂ ಒಬ್ಬರು. ಪ್ರಧಾನಿ ನರೇಂದ್ರ ಮೋದಿಯವರ ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುವ ಕನಸು ಈಗಾಗಲೇ ಜಾರಿಯಲ್ಲಿದೆ. ಇದನ್ನು ಎಲ್ಲರೂ ಮನಗಾಣಬೇಕಿದೆ ಎಂದು ಹೇಳಿದರು.


ಬಿಜೆಪಿ ನಗರಾಧ್ಯಕ್ಷ ನವೀನ್, ಮುಖಂಡರಾದ ಮಂಜುನಾಥ್, ರತನ್, ಪುಟ್ಟಸ್ವಾಮಿ, ದೇವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net