ಹಣ ಪಡೆದು ಯುವಕರಿಗೆ ಶಕ್ತಿ ಯೋಜನೆ ಟಿಕೆಟ್

Published on

ಚಾಮರಾಜನಗರ : ಯುವಕರಿಗೆ ಶಕ್ತಿ ಯೋಜನೆ ಟಿಕೆಟ್ ನೀಡಿ ವಂಚಿಸುತ್ತಿದ್ದ ಕಂಡಕ್ಟರ್ ವಿರುದ್ಧ ಕ್ರಮ ವಹಿಸುವಂತೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಶನಿವಾರ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ ಯುವಕರು ಮಾತನಾಡಿ, ಬೇಡರಪುರ ಸಮೀಪದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಿಂದ ಚಾಮರಾಜನಗರಕ್ಕೆ ಬರುವಾಗ ಸಾರಿಗೆ ಬಸ್ ಕಂಡಕ್ಟರ್ ಹಣ ತೆಗೆದುಕೊಂಡು ಯುವಕರಿಗೆ ಶಕ್ತಿ ಯೋಜನೆ ಟಿಕೆಟ್ ವಿತರಣೆ ಮಾಡಿದ್ದಾರೆ.

ಈ ಕುರಿತು ಪ್ರಶ್ನೆ ಮಾಡಿದರೆ ನಮ್ಮೊಡನೆಯೇ ದಬಾಯಿಸಿ ಮಾತನಾಡಿದ್ದಾರೆ. ನಾವು ಅಲ್ಲದೆ ಇತರ ಪ್ರಯಾಣಿಕರಿಗೂ ವಂಚನೆ ಮಾಡಿದ್ದಾರೆ. ಈ ಕುರಿತು ಕಂಡಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಗುರುಕುಮಾರ್, ಅಕ್ಷಯ್, ದರ್ಶನ್, ಪ್ರದೀಪ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net