ಹಣ ಪಡೆದು ಕೈದಿಗಳಿಗೆ ಊಟಕ್ಕೆ ಮೀನು ಪೂರೈಕೆ

Hindalaga jail
Published on

ಬೆಳಗಾವಿ: ಇಲ್ಲಿನ ಹಿಂಡಲಗಾ ಕಾರಾಗೃಹದಲ್ಲಿ ಸಿಬ್ಬಂದಿಗಳೇ ಕೈದಿಗಳಿಂದ ಹಣ ಪಡೆದು ಊಟಕ್ಕೆ ಮೀನು ಪೂರೈಕೆ ಮಾಡಿರುವ ವಿಡಿಯೋ ಸೋಮವಾರ ವೈರಲ್ ಆಗಿದೆ. ಕಾರಾಗೃಹ ಸಿಬ್ಬಂದಿ ಕೈದಿಗಳ ಸಹಚರರಿಂದ ಹಣ ಪಡೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಈ ಹಣದಿಂದ ಕೈದಿಗಳಿಗೆ ಮೀನು ಪೂರೈಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾರಾಗೃಹದಲ್ಲಿನ ಕೈದಿಗಳಿಗೆ ಕರಾವಳಿ ಭಾಗದಲ್ಲಿ ಮಾತ್ರ ಊಟಕ್ಕೆ ಮೀನು ನೀಡಲಾಗುತ್ತದೆ. ಆದರೆ, ಹಿಂಡಲಗಾ ಕಾರಾಗೃಹದಲ್ಲಿ ಮೀನು ನೀಡುವುದಿಲ್ಲ. ಇಲ್ಲಿನ ಕೈದಿಗಳು ಸಿಬ್ಬಂದಿಗಳಿಗೆ ಹಣ ನೀಡಿ ಊಟಕ್ಕೆ ಮೀನು ತರಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಹಿಂಡಲಗಾ ಜೈಲಿನಲ್ಲಿರುವ ಕೈದಿಗಳಿಗೆ ಅಕ್ರಮ ಗಾಂಜಾ, ಮೊಬೈಲ್ ಮತ್ತು ಮೀನು ನೀಡಿರುವ ಪ್ರಕರಣದ ತನಿಖೆ ನಡೆಸಲಾಗುವುದು. | ಇಡಾ ಮಾರ್ಟೀನ್ ಮಾರ್ಬನ್ಯಾಂಗ್ ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net