ಹಣ ದ್ವಿಗುಣಗೊಳಿಸುವುದಾಗಿ ಹೇಳಿ 16 ಲಕ್ಷ ರೂ. ವಂಚನೆ

online fraud
Published on

ಹಾಸನ: ಸಾಮಾಜಿಕ ಜಾಲತಾಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಬೇಲೂರು ಪಟ್ಟಣದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 16,06,000 ರೂ. ವಂಚಿಸಿದ್ದಾನೆ.
ಬೇಲೂರಿನ ವೈಕುಂಟ ಬೀದಿಯ ನಿವಾಸಿಯೊಬ್ಬರ ಫೇಸ್‌ಬುಕ್ ಖಾತೆಗೆ ಫಾರ್ಚೂನ್ ಎಂ ಹೆಸರಿನ ಜಾಹೀರಾತು ಬರುತ್ತಿದ್ದು, ಸದರಿ ಜಾಹೀರಾತಿನ ಲಿಂಕ್ ಅನ್ನು ಸಂತ್ರಸ್ತ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ. ಅದರಲ್ಲಿ ತನ್ನ ಹೆಸರು, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ಸ್ವ-ವಿವರ ಲಗತ್ತಿಸಿದ್ದಾರೆ. ನಂತರ ಬೇರೊಂದು ಅಪ್ಲಿಕೇಷನ್‌ನಿಂದ ಸಂತ್ರಸ್ತ ವ್ಯಕ್ತಿಯ ಮೊಬೈಲ್ ನಂಬರ್‌ಗೆ 1,50,000 ರೂ. ಬೆಲೆಯ ಶೇರ್ ಕೊಂಡುಕೊಂಡರೆ ಹಣ ದ್ವಿಗುಣಗೊಳ್ಳುತ್ತದೆ ಎಂಬ ಸಂದೇಶ ಬಂದಿದೆ. ಅದರಂತೆ ಸಂತ್ರಸ್ತ ವ್ಯಕ್ತಿ 1,50,000 ಹಣ ಹಾಕಿದ್ದಾರೆ. ಇದೇ ರೀತಿ ವಿವಿಧ ದಿನಾಂಕಗಳಂದು ಹಲವು ಬಾರಿ ಒಟ್ಟು 16,06,000 ಹಣ ಹಾಕಿದ್ದು ನಂತರ ಹಣ ವಾಪಸ್ ಬಿಡಿಸಿಕೊಳ್ಳಲು ಹೋದಾಗ ಪುನಃ 18 ಲಕ್ಷ ರೂ. ಕಟ್ಟಬೇಕು ಎಂದು ಹೇಳಿದ್ದಾರೆ. ಆನ್‌ಲೈನ್ ವಂಚನೆ ಸಂಬಂಧ ಸಂತ್ರಸ್ತ ವ್ಯಕ್ತಿ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net