ಹಣ ದುರ್ಬಳಕೆ ಪ್ರಕರಣ ದಾಖಲು

Published on

ಬಳ್ಳಾರಿ : ಗ್ರಾಹಕರ ತಿಳುವಳಿಕೆಗೆ ಬಾರದಂತೆ ಖಾತೆಗಳಿಂದ ಸಾಲ ಮಂಜೂರು ಮಾಡಿಕೊಂಡು, ಸ್ವಂತಕ್ಕೆ ಬಳಸಿಕೊಂಡ ಆರೋಪದ ಮೇಲೆ ಇಬ್ಬರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕ ಹನುಮಂತರಾಯ ಗಿರಿಡ್ಡಿ ಅವರು ನೀಡಿದ ದೂರಿನ ಹಿನ್ನಲೆ ಪೊಲೀಸರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಿದ್ದಮ್ಮನಹಳ್ಳಿಯ ವ್ಯವಸ್ಥಾಪಕ ಬಿ. ನವೀನ್‌ ಕುಮಾರ್‌ ಮತ್ತು ಸಹಾಯಕ ವ್ಯವಸ್ಥಾಪಕ ಕನ್ನ ಸುರೇಶ್‌ ಬಾಬು ಎನ್ನುವವರು 2022–2023ನೇ ಸಾಲಿನಲ್ಲಿ 11 ಗ್ರಾಹಕರಿಂದ ಒಟ್ಟು 16. 55 ಲಕ್ಷ ರೂ. ಸಾಲ ಮಂಜೂರು ಮಾಡಿಕೊಂಡು, ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಕುಡುತಿನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net