ಹಡಪದ ಸಮಾಜ ಬಗ್ಗೆ ಗೌರವವಿದೆ

prabhu chouhan
Published on

ಬಸವಕಲ್ಯಾಣ: ಉಪ ಚುನಾವಣೆ ಪ್ರಚಾರ ಭಾಷಣದಲ್ಲಿ ನಾನು ಹಡಪದ ಸಮಾಜದ ಬಗ್ಗೆ ಅವಹೇಳನಕಾರಿ ಮಾತು ಆಡಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಚಿವ ಚವ್ಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಡಪದ ಸಮಾಜದ ಬಗ್ಗೆ ನನಗೆ ಅತ್ಯಂತ ಗೌರವ, ಅಭಿಮಾನವಿದೆ. ಆ ಸಮಾಜದ ಕುರಿತು ನಾನು ಯಾವುದೇ ರೀತಿಯ ಅವಮಾನಕರ ಶಬ್ದ ಬಳಸಿಲ್ಲ. ನನ್ನ ಅಂದಿನ ಭಾಷಣದ ಹಿಂದಿನ ಅರ್ಥ ಅರಿಯದೆ ವಿರೋಧಿಗಳು ಅಪಪ್ರಚಾರ ನಡೆಸಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಕಾಂಗ್ರೆಸ್, ಜೆಡಿಎಸ್ ನವರನ್ನು ಗೆಲ್ಲಿಸಿದರೆ ಏನ್ಮಾಡ್ತಾರೆ ಎಂಬ ಧಾಟಿಯಲ್ಲಿ ನಾನು ಮಾತನಾಡಿರುವೆ. ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.

ಬಸವಣ್ಣನವರ ಕಾಯಕ ತತ್ವ ಬಲವಾಗಿ ನಂಬುವ ವ್ಯಕ್ತಿ ನಾನು. ಹಡಪದ ಸಮಾಜದವರು ಕಾಯಕ ಜೀವಿಗಳು. ಅವರಿಗೆ ಅವಮಾನ ಮಾಡುವ ಹೇಳಿಕೆ ನೀಡಿಲ್ಲ. ನಾನೂ ತಳ ಸಮುದಾಯದಿಂದ ಬಂದವನು. ಹೀಗಾಗಿ ಸರ್ವ ಸಮಾಜವನ್ನು ಗೌರವದಿಂದ ಕಾಣುತ್ತಲೇ ಬಂದಿದ್ದೇನೆ. ಆದರೂ ಕೆಲವರಿಗೆ ನೋವಾದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net