ಚಾಮರಾಜನಗರ: ನಗರದ ಬೇಕರಿಯೊಂದರ ಕೆಲಸಗಾರ ಹಠಾತ್ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಗುರುವಾರ ಮೃತಪಟ್ಟಿದ್ದಾನೆ.
ನಗರದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವೇಣುಗೋಪಾಲ್(56) ಮೃತ ವ್ಯಕ್ತಿ. ಈತ ಗ್ರಾಹಕರಿಗೆ ಸ್ವೀಟ್ ಕೊಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ದೃಶ್ಯಾವಳಿ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.