ಹಗ್ಗ ಜಗ್ಗಾಟದಲ್ಲಿ ಪೊಲೀಸ್ ತಂಡ ಪ್ರಥಮ  -ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ವಿವಿಧ ಕ್ರೀಡೆ

hagga_20230830145209600.jpg
Published on

ದಾವಣಗೆರೆ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪೊಲೀಸ್ ತಂಡವು ಪುರುಷ ಹಾಗೂ ಮಹಿಳಾ ವಿಭಾಗ ಎರಡರಲ್ಲೂ ಪ್ರಥಮ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ಕ್ರೀಡಾ ವಸತಿ ನಿಲಯದ ಕುಸ್ತಿ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಸೇಂಟ್‌ಪಾಲ್ಸ್ ಕಾಲೇಜು ವಿದ್ಯಾರ್ಥಿನಿಯರು ದ್ವಿತೀಯ ಬಹುಮಾನ ಪಡೆದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ, ಖೋಖೋ ತರಬೇತುದಾರ ಜೆ. ರಾಮಲಿಂಗಪ್ಪ, ಎಂ.ಸಿ. ಸುನೀತಾ, ಹಿಮಾಲಯನ್ ಅಡ್ವೆಂಚರ್ ಸಂಘಟನೆಯ ಎನ್.ಕೆ. ಕೊಟ್ರೇಶ್, ಕಚೇರಿ ಅಧೀಕ್ಷಕಿ ಅರ್ಪಿತಾ, ಸೈಯದ್ ಬಾಷಾ, ಅಶೋಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net