ಹಗೆವು ಕುಸಿತ: ಜನರಲ್ಲಿ ಆತಂಕ

IMG-20201031-WA0005
Published on

ವಿಜಯಪುರ: ಕಳೆದ ತಿಂಗಳು ಸುರಿದಿದ್ದ ಭಾರಿ ಮಳೆಯಿಂದಾಗಿ ಮನೆ ಮುಂದಿನ ರಸ್ತೆಯ ಮದ್ಯದಲ್ಲಿ ಭೂಮಿ ಕುಸಿತವಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ದೇಶಮುಖ ಓಣಿಯಲ್ಲಿ ನಡೆದಿದೆ. ಓಣಿಯ ನಾನಾಸಾಹೇಬ ದೇಶಮುಖ ಎಂಬುವವರ ಮನೆಮುಂದಿನ ರಸ್ತೆಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ಜರುಗಿದೆ. ರಸ್ತೆ ಹಾಗೂ ಚರಂಡಿ ಪಕ್ಕದಲ್ಲೇ ಸುಮಾರು ಹತ್ತು ಅಡಿಯಷ್ಟು ಭೂಮಿ ಕುಸಿತವಾಗಿದ್ದು, ಇದು ಭೂ ಕುಸಿತವೋ ಅಥವಾ ಹಗೆವು ಕುಸಿತವೋ ಎಂಬುದು ತಿಳಿಯದೆ ಜನತೆ ನಡೆದುಕೊಂಡು ಹೋಗಲೂ ಭಯ ಪಡುತ್ತಿದ್ದಾರೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನೆಯಿಂದ ದೇಶಮುಖ ಕಾಲೋನಿ ನಿವಾಸಿಗಳು ಬೆಚ್ಚಿಬಿದ್ದಿದ್ದು, ಇದು ಹಿಂದನ ಕಾಲದ ಹಗೆವು ಇರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ನಾಲತವಾಡ ಪಟ್ಟಣ ಪಂಚಾಯತಿಯ ಆರೋಗ್ಯ ಕಿರಿಯ ಸಾಹಾಯಕ ಚಂದ್ರಶೇಖರ ಹಾಗೂ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಕುಸಿದಿದ್ದ ಭೂಮಿಯ ಒಳಗೆ ಕಲ್ಲುಗಳನ್ನು ಹಾಕಿ ಗುಂಡಿ ತುಂಬಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net