

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು ೧ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಪಾಣೆಗಾಂವ ಗ್ರಾಮದಲ್ಲಿ ನಡೆದಿದೆ. ಪಾಣೆಗಾಂವ ಗ್ರಾಮದ ಯಲ್ಲಾಲಿಂಗ ಸಿಡಗಂಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಆ.೨೬ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು ಅಲಮಾರಾದಲ್ಲಿದ್ದ ೩೦ ಸಾವಿರ ರೂ.ನ ಐದು ಗ್ರಾಂ ಬಂಗಾರದ ಜೀರಾಮಣಿ, ಐದು ಗ್ರಾಂ ಬಂಗಾರದ ಬೋರಮಾಳ ಸರ, ೨೦ ಸಾವಿರ ರೂ.ನ ಮೂರು ಗ್ರಾಂನ ಕಿವಿ ಓಲೆ, ೧೨ ಸಾವಿರ ರೂ.ನ ಒಂದು ಗ್ರಾಂನ ಎರಡು ಪದಕ, ಮೂರು ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ ಹಾಗೂ ಗಲ್ಲದಲ್ಲಿದ್ದ ಅಂದಾಜು ಆರು ಸಾವಿರ ರೂ. ಸೇರಿ ಒಟ್ಟು ೧.೦೧ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಫರಹತಾಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.