

ಚಿತ್ರದುರ್ಗ: ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅ.16ರಂದು ನಡೆಸಲು ಉದ್ದೇಶಿಸಿದ್ದ ಹಕ್ಕೊತ್ತಾಯ ಸಮಾವೇಶವನ್ನು ಅ.23ಕ್ಕೆ ಮುಂದೂಡಲಾಗಿದೆ ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಬಿ.ಟಿ.ಜಗದೀಶ್ ತಿಳಿಸಿ ದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಶಾಶ್ವತ ಹಿಂದುಳಿದ ವರ್ಗಗಗಳ ಆಯೋಗ ಸಿದ್ಧಪಡಿಸಿದ ಸಮೀಕ್ಷಾ ವರದಿ ಜಾರಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಸಮಾವೇಶನ ಏರ್ಪಡಿಸಲಾಗಿತ್ತು.
ಆದರೆ ಮಳೆ ಮುಂದುವರಿರುವ ಮತ್ತು ರಾಜ್ಯಸಚಿವ ಸಂಪುಟ ಸಭೆ ಅ. 25ಕ್ಕೆ ನಡೆಯುವ ಕಾರಣಕ್ಕೆ ಹಕ್ಕೊತ್ತಾಯ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.