ಹಕ್ಕುಪತ್ರಕ್ಕೆ ಒತ್ತಾಯಿಸಿ ಮನವಿ

6 skp 4
ದಿಂದ ಹಕ್ಕುಪತ್ರಕ್ಕೆ ಆಗ್ರಹಿಸಿ ತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಎಚ್.ಹನುಮಂತಪ್ಪ, ಹೊಳೆಯಪ್ಪ ತಡಗಣಿ, ಸುರೇಶ್ ಹೂವಿನ ಮಂಡಿ, ಮಲ್ಲಿಕಾರ್ಜುನ್ ಇತರರಿದ್ದರು.
Published on

ಶಿಕಾರಿಪುರ: ಜಿಲ್ಲಾಕಾರಿಗಳ ಸ್ಪಷ್ಟ ಲಿಖಿತ ಆದೇಶವಿದ್ದರೂ ಅರಣ್ಯ ಹಕ್ಕು ಕಾಯ್ದೆಯಡಿ ನೀಡಿರುವ ಹಕ್ಕುಪತ್ರಗಳಿಗೆ ಪಹಣಿ ಕಲಂ ನಂಬರ್ 11ರಲ್ಲಿ ಖಾತೆಗೆ ಸೇರಿಸದಿರುವ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿಕಾರಿಪುರ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಮಾಜದಿಂದ ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಮಹರ್ಷಿ ವಾಲ್ಮೀಕ ನಾಯಕ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ ಮಾತನಾಡಿ, ಶಿಕಾರಿಪುರ ತಾಲೂಕಿನಲ್ಲಿ 2016-17ನೇ ಸಾಲಿನಲ್ಲಿ 613 ಪರಿಶಿಷ್ಟ ಪಂಗಡದ ರೈತರಿಗೆ ಅರಣ್ಯ ಕಾಯ್ದೆಯಡಿ ಹಕ್ಕು ಪತ್ರ ನೀಡಲಾಗಿದೆ. ಇದರಲ್ಲಿ 244ಕ್ಕೂ ಅಕ ಹಕ್ಕುಪತ್ರಗಳ ಪಹಣಿ ಕಾಲಂ 11ರಲ್ಲಿ ಖಾತೆ ಮಾಡಲು ಹಲವು ಬಾರಿ ತಹಸೀಲ್ದಾರ್ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ಎಸ್‌ಸಿ ಕಚೇರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಖಾತೆ ಮಾಡಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net