ಹಕ್ಕುಪತ್ರ ವಿತರಣೆಗೆ ಮನವಿ

CTD 27-AGENTERU (1)--01
Published on

ಚಿತ್ರದುರ್ಗ: ಪತ್ರಿಕಾ ವಿತರಕರು, ಹಂಚಿಕೆದಾರರಿಗೆ ಈಗಾಗಲೇ ಮಂಜೂರಾಗಿರುವ ನಿವೇಶನದ ಹಕ್ಕುಪತ್ರ ವಿತರಣೆಗೆ ತಕ್ಷಣ ಕ್ರಮಕೈಗೊಂಡು ನಮ್ಮ ಬದುಕಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರು ಹಾಗೂ ವಿತರಕರ ಸಂಘದ ಪದಾಧಿಕಾರಿಗಳು, ಸದಸ್ಯರು ಈ ಸಂಬಂಧ ಮನವಿ ಸಲ್ಲಿಸಿದರು.

ಚಳಿ-ಗಾಳಿ-ಮಳೆ ಲೆಕ್ಕಿಸದೆ ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ಕಾರ್ಯ ಮಾಡುತ್ತಿರುವ ವಿತರಕರು, ಹಂಚಿಕೆದಾರರ ಬದುಕು ಸಂಕಷ್ಟದಲ್ಲಿದೆ. ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಈ ಹಿಂದೆ ನಮ್ಮ ನಿರಂತರ ಒತ್ತಡದ ಫಲವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ, ಹಕ್ಕುಪತ್ರ ದೊರೆತಿಲ್ಲ. ತಾವುಗಳು ಕೂಡಲೇ ಹಕ್ಕುಪತ್ರ ಕೊಡಿಸಿ, ಮನೆ ನಿರ್ಮಾಣಕ್ಕೆ ಸಹಾಯಧನ ಕೊಡಿಸುವ ಕೆಲಸ ಮಾಡಬೇಕು. ಈ ಮೂಲಕ ನಮ್ಮ ನೆಮ್ಮದಿ ಬದುಕಿಗೆ ಸಹಕರಿಸಬೇಕು ಎಂದು ಕೋರಿದರು. ಬಳಿಕ ಶಾಸಕರಿಗೆ ಸಂಘದ ಸದಸ್ಯರು ಸನ್ಮಾನಿಸಿದರು.

ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಆರ್.ಮೋಹನ್, ಎಚ್.ಕುಬೇಂದ್ರಪ್ಪ, ಮಲ್ಲಿಕಾರ್ಜುನ್, ಪ್ರಧಾನ ಕಾರ‌್ಯದರ್ಶಿ ಆರ್.ಪ್ರಶಾಂಶ್, ಸದಸ್ಯರಾದ ಕರಿಯಪ್ಪ, ಮಂಜುನಾಥ್ ನಾಯ್ಡು, ಕರಿಬಸಪ್ಪ ಬಣಕಾರ್, ಮೈಲಾರಿ, ಕಿರಣ್‌ಕುಮಾರ್, ತಿಪ್ಪೇಸ್ವಾಮಿ,ನಾಗರಾಜ್, ರಾಜು, ಸುನೀಲ್, ಪಾಲಯ್ಯ, ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net